ರಾಯಚೂರು, ಜುಲೈ 20
ಈ ನಡುವೆಯೇ, ತಾತಪ್ಪ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ ಎಂಬ ಮಾಹಿತಿ ಕೂಡ ಲಭ್ಯವಾಗಿತ್ತು. ಆದರೆ ಈಗ ಇದೇ ಪ್ರಕರಣಕ್ಕೆ ನೂತನ ಬೆಳಕು ಸಿಕ್ಕಿದ್ದು, ತಾತಪ್ಪನ ವಿರುದ್ಧವೇ ಗಂಭೀರ ಆರೋಪಗಳು ಕೇಳಿಬಂದಿವೆ.
ಬಾಲ್ಯವಿವಾಹದ ಸಂಶಯ:
ಯಾದಗಿರಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ರಕ್ಷಣಾ ಘಟಕ ತನಿಖೆ ನಡೆಸಿದಾಗ ಪತ್ನಿ ಗದ್ದೆಮ್ಮಳ ವಯಸ್ಸು ಕೇವಲ 15 ವರ್ಷ 8 ತಿಂಗಳು ಎಂಬ ಮಾಹಿತಿ ಶಾಲಾ ದಾಖಲೆಗಳ ಮೂಲಕ ದೃಢಪಟ್ಟಿದೆ. ಈ ಆಧಾರದ ಮೇಲೆ ತಾತಪ್ಪ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿರುವುದು ಬಹಿರಂಗವಾಗಿದೆ.
ಈ ಸಂಬಂಧ ಯಾದಗಿರಿ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಕ್ಕಳ ರಕ್ಷಣಾಧಿಕಾರಿಗಳಿಗೆ ಅಧಿಕೃತ ಪತ್ರವೂ ಕಳಿಸಲಾಗಿದೆ. ರಾಯಚೂರು ಜಿಲ್ಲಾಧಿಕಾರಿ, ಸಿಡಿಪಿಒ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ತಾತಪ್ಪನ ಮನೆಗೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ದಾಖಲೆ ಒದಗಿಸದ ತಾತಪ್ಪ ಕುಟುಂಬ:
ತಾತಪ್ಪ ಕುಟುಂಬವು ಯಾವುದೇ ಲಿಖಿತ ದಾಖಲೆಗಳನ್ನು ನೀಡದೆ ಕೇವಲ ಮೌಖಿಕವಾಗಿ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಗದ್ದೆಮ್ಮಳ ವಯಸ್ಸು ಕುರಿತ ದಾಖಲೆಗಳನ್ನು ನೀಡುವಂತೆ ತಾತಪ್ಪನಿಗೆ ಜುಲೈ 21ರವರೆಗೆ ಸಮಯ ನೀಡಿದ್ದಾರೆ.
ದಾಖಲೆಗಳಿಲ್ಲದಿದ್ದರೆ ಎಫ್‌ಐಆರ್:
ನಿಗದಿತ ಸಮಯದೊಳಗೆ ದಾಖಲೆಗಳು ಸಲ್ಲಿಸಲಿಲ್ಲವಾದರೆ, ತಾತಪ್ಪ ಮತ್ತು ಕುಟುಂಬಸ್ಥರ ವಿರುದ್ಧ ಬಾಲ್ಯವಿವಾಹ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗುವುದು ಎಂಬ ಸೂಚನೆ ನೀಡಲಾಗಿದೆ.
ಈಗಾಗಲೇ ಕೊಲೆ ಯತ್ನದ ಆರೋಪದ ಹಿನ್ನೆಲೆ ಹಿನ್ನಲೆಯಲ್ಲಿ ತಾತಪ್ಪ ವಿವಾದದ ಕೇಂದ್ರಬಿಂದುವಾಗಿದ್ದು, ಇದೀಗ ಬಾಲ್ಯವಿವಾಹ ಆರೋಪವೂ ಸೇರಿ ಪ್ರಕರಣ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.