ಮಾ. 18:
ಟಿವಿ ಸ್ಟೇಷನ್ ಸಮೀಪದ ರಿಂಗ್ ರೋಡ್ ಬಳಿ ದೃಶ್ಯ:
ನಗರದ ಟಿವಿ ಸ್ಟೇಷನ್ ಸಮೀಪದ ಹುಮನಾಬಾದ್ ರಿಂಗ್ ರೋಡ್ ಬಳಿಯ ರಸ್ತೆಯೊಂದರಲ್ಲಿ ಈ ವಿಡಿಯೋ ಚಿತ್ರೀಕರಿಸಲಾಗಿದ್ದು, ಕಿಡಿಗೇಡಿಗಳು ತಾವು ಚಿತ್ರೀಕರಿಸಿದ ವಿಡಿಯೋ ತುಣುಕನ್ನು ನಂತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. ಈ ವಿಡಿಯೋ ತುಣುಕು ಜನಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಇದೀಗ ಪೊಲೀಸರು ಕೂಡಾ ಈ ವಿಡಿಯೋ ತಲುಪಿದ ತಕ್ಷಣಲೇ ಎಚ್ಚರಿಕೆಯಿಂದ ಕ್ರಮ ಕೈಗೊಂಡಿದ್ದಾರೆ.
ಮರ್ಡರ್ ಮಾಡಿದಂತೆ ನಟಿಸಿದ ಯುವಕ:
ಮೊಳ ಉದ್ದದ ಕೂದಲು ಬಿಟ್ಟ ಯುವಕನೊಬ್ಬ ತನ್ನ ಮುಖದ ಮೇಲೆ ಕೂದಲು ಹರಡಿಸಿಕೊಂಡು, ಕೈಯಲ್ಲಿರುವ ಸುತ್ತಿಗೆಯಿಂದ ಭೀಕರವಾಗಿ ಕೊಲೆ ಮಾಡಿದಂತೆ ನಟಿಸುತ್ತಿದ್ದಾನೆ. ಬಳಿಕ ವಿಕಾರವಾಗಿ ಚೀರುತ್ತಿರುವ ವಿಡಿಯೋ ತುಣುಕು ಎಲ್ಲೆಡೆ ಹರಿದಾಡಲು ಆರಂಭಿಸುತ್ತಿದ್ದಂತೆಯೇ ಪೊಲೀಸರು ತಕ್ಷಣ ಈ ಘಟನೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಅಣಕು ಮರ್ಡರ್ ಸತ್ಯಾಸತ್ಯತೆ:
ಪೊಲೀಸರು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿದಾಗ, ಇದು ನಿಜವಾದ ಕೊಲೆ ಅಲ್ಲ, ಬದಲಿಗೆ ಅಣಕು ಮರ್ಡರ್ ದೃಶ್ಯ ಎಂಬುದು ಖಾತ್ರಿಪಡಿಸಲಾಗಿದೆ. ಆದರೂ, ಈ ರೀತಿಯ ವಿಡಿಯೋ ತುಣುಕು ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲ ಮೂಡಿಸುತ್ತಿದ್ದರಿಂದ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸಬ್-ಅರ್ಬನ್ ಠಾಣೆ ಪೊಲೀಸರು ಮುಂದಾಗಿದ್ದಾರೆ.
ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ ಪೊಲೀಸರು:
ಈ ರೀಲ್ ಸೃಷ್ಟಿಸಿದ ಮತ್ತು ವೈರಲ್ ಮಾಡಿದ ಯುವಕನ ಬಗ್ಗೆ ಮಾಹಿತಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ವಿಡಿಯೋ ತುಣುಕಿನ ಮೂಲ ಪತ್ತೆ ಹಚ್ಚಲು ಪೊಲೀಸ್ ಇಲಾಖೆ ತೀವ್ರ ಶ್ರಮ ಪಡುತ್ತಿದ್ದು, ಶೀಘ್ರದಲ್ಲೇ ಈ ಕೃತ್ಯದ ಹಿಂದೆ ಇರುವವರನ್ನು ಬಂಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.