ಯಾದಗಿರಿ ಮಾ 14:-
ಈ ಮಹತ್ವದ ಕಾರ್ಯಕ್ರಮವು ದಿನಾಂಕ ಮಾರ್ಚ್ 16, 2025, ಭಾನುವಾರ, ಸ್ಥಳ ನಂ 2 2 ಎ, ಮೊದಲ ಮಹಡಿ, ಚರಿತ್ ಕಾಂಪ್ಲೆಕ್ಸ್, ಬ್ಯಾಡರಹಳ್ಳಿ ಬಸ್ ನಿಲ್ದಾಣ ಹತ್ತಿರ, ಮಾಗಡಿ ಮುಖ್ಯರಸ್ತೆ, ಬೆಂಗಳೂರು, ಇಲ್ಲಿ ಜರುಗಲಿದೆ. ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ) ಇದರ ಸಹಯೋಗದೊಂದಿಗೆ ಈ ಚಾನಲ್ ಜನತೆಗೆ ಪರಿಚಯಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ, ಯಾದಗಿರಿ ಜಿಲ್ಲಾಧ್ಯಕ್ಷರಾದ ಹಣಮಂತ ಮೋಟ್ನಳ್ಳಿ, ತಾಲೂಕು ಅಧ್ಯಕ್ಷರಾದ ಭೀಮರಾಯ ಹತ್ತಿಕುಣಿ ಹಾಗೂ ಜಿಲ್ಲೆಯ ವಿವಿಧ ಪದಾಧಿಕಾರಿಗಳು ಚಾನಲ್‌ಗೆ ಹಾರ್ದಿಕ ಶುಭಕೋರಿದರು. ಅವರು, “ಈ ಚಾನಲ್ ಜನಸಾಮಾನ್ಯರ ಹಕ್ಕುಗಳಿಗಾಗಿ ದುಡಿದು, ನ್ಯಾಯದ ಮಾತು ಹೇಳಲಿ” ಎಂದು ಹಾರೈಸಿದ್ದಾರೆ.
‘ನವ ಕರ್ನಾಟಕ ಏನ್ ಕೆ ಟಿವಿ’ ರಾಜ್ಯದ ಜನತೆಯ ಸಮಸ್ಯೆಗಳನ್ನು ಬೆಳಕುಹಾಕಲು ಮತ್ತು ನ್ಯಾಯಕ್ಕಾಗಿ ಹೋರಾಡಲು ಬದ್ಧವಾಗಿದೆ. ಇಂದಿನ ಮಾಧ್ಯಮ ಕ್ಷೇತ್ರದಲ್ಲಿ ಹೊಸ ದಿಕ್ಕು ನೀಡಲು ಸಜ್ಜಾಗಿರುವ ಈ ಚಾನಲ್ ಉದ್ಘಾಟನೆಯೊಂದಿಗೆ ಮತ್ತೊಂದು ಪ್ರಭಾವಶಾಲಿ ಮಾಧ್ಯಮ ತಾಣವಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದು ಯಾದಗಿರಿ ಜಿಲ್ಲಾಧ್ಯಕ್ಷರಾದ ಹಣಮಂತ ಮೋಟ್ನಳ್ಳಿ ಹಾರೈಸಿದ್ದಾರೆ.