ಯಾದಗಿರಿ ಮಾ ೦೬:–
ಸಂಘದ ಸದಸ್ಯರು ಸಾಮಾಜಿಕ ಜವಾಬ್ದಾರಿಯ ತೊಡಗಿಸಿಕೊಂಡು, ಜನ್ಮದಿನದ ಸಂದರ್ಭವನ್ನು ಮಹತ್ವಪೂರ್ಣ ರೀತಿಯಲ್ಲಿ ಆಚರಿಸುವ ಮೂಲಕ ಮಾದರಿಯಾದ ಕಾರ್ಯವನ್ನು ನಿರ್ವಹಿಸಿದ್ದಾರೆ. ಈ ಅಭಿಯಾನವನ್ನು ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಶಿವಶರಣಪ್ಪ ಕುಂಬಾರ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ಶಿವಶರಣಪ್ಪ ಕುಂಬಾರ ಅವರು, “ನಮ್ಮ ಸಂಸ್ಥಾಪಕರಾದ ಸೋಮಶೇಖರ್ ಕೆ ಅವರ ಜನ್ಮದಿನದ ಸುವರ್ಣ ಕ್ಷಣವನ್ನು ಜನೋಪಯೋಗಿ ಕಾರ್ಯಕ್ರಮದ ಮೂಲಕ ಆಚರಿಸಿರುವುದು ನಮ್ಮ ಎಲ್ಲರಿಗೂ ಹೆಮ್ಮೆ. ಸಮಾಜದ ಒಳ್ಳೆಯದಕ್ಕಾಗಿ ಈ ರೀತಿಯ ಕಾರ್ಯಕ್ರಮಗಳು ಅಗತ್ಯ” ಎಂದು ಹೇಳಿದರು.
ಈ ಸಮಾಜಮುಖಿ ಕಾರ್ಯದಲ್ಲಿ ಸಂಘದ ಪ್ರಮುಖ ಸದಸ್ಯರಾದ ಈಶ್ವರ್ ನಾಯಕ್, ಮಲ್ಲಯ್ಯ ಮುಸ್ಟೂರು, ಸಾಬಣ್ಣ ಜೋಗಿ, ದೇವೇಂದ್ರಪ್ಪ ಪೂಜಾರಿ, ತಾಯಪ್ಪ ಪೂಜಾರಿ, ಶಿವು ಅಂಬಣ್ಣ, ದ್ಯಾನಪ್ಪ ಗಣಪುರ್ ಮತ್ತು ಹಲವಾರು ಆಟೋ ಚಾಲಕರು ಭಾಗವಹಿಸಿ, ಸೇವಾ ಕಾರ್ಯಕ್ಕೆ ಸಹಕಾರ ನೀಡಿದರು.
ಸೋಮಶೇಖರ್ ಕೆ ಅವರ ಜನ್ಮದಿನದ ಪ್ರಯುಕ್ತ, ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಅವರಿಗೆ ನೂರು ವರ್ಷಗಳ ಆಯುಷ್ಯ, ಆರೋಗ್ಯ, ಶಾಂತಿ ಮತ್ತು ಸಮೃದ್ಧಿಯನ್ನು ಕರುಣಿಸಲೆಂದು ಬೇಡಿಕೊಳ್ಳಲಾಯಿತು. ಈ ಕಾರ್ಯವು ತಾಯಂದಿರು ಸೇರಿದಂತೆ ಆಸ್ಪತ್ರೆಯ ರೋಗಿಗಳಿಗೆ ಸಂತಸದ ಕ್ಷಣಗಳನ್ನು ಒದಗಿಸಿತು.