ಯಾದಗಿರಿ, ಮಾರ್ಚ್ 04:
ಕುಂಬಾರ ಸಮಾಜ & KRCPA ಆಟೋ ಚಾಲಕರ ಸಂಘ ಯಾದಗಿರಿ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿವಿಧ ಗಣ್ಯರು, ಯುವ ಮುಖಂಡರು ಮತ್ತು ಸಂಘದ ಸದಸ್ಯರು ಭಾಗವಹಿಸಿದರು. ಕರ್ನಾಟಕ ಪ್ರದೇಶ ಕುಂಬಾರರ ಸಂಘ ಯುವ ಘಟಕ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ಕುಂಬಾರ ಹಾಗೂ KRCPA ಜಿಲ್ಲಾ ಉಪಾಧ್ಯಕ್ಷರು ಅವರ ನೇತೃತ್ವದಲ್ಲಿ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೈತ ಸಂಘ (ರೈತ ಸೇನೆ) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕುಂಬಾರ ಅವರು ಭಾಗವಹಿಸಿ,
ದೇವಿಂದ್ರಪ್ಪ ಕುಂಬಾರ ಮಲ್ಲ ಅವರು
“ಸರ್ವಜ್ಞರ ತತ್ವಗಳು ಸಮಾಜದಲ್ಲಿ ನೈತಿಕತೆ, ಜ್ಞಾನ ಮತ್ತು ಸಮಾನತೆಯನ್ನು ಉತ್ತೇಜಿಸುತ್ತವೆ. ಇವು ನಮ್ಮ ಮುಂದಿನ ಪೀಳಿಗೆಗೆ ಮಾರ್ಗದರ್ಶಕರಾಗಬೇಕು” ಎಂದು ತಮ್ಮ ಭಾಷಣದಲ್ಲಿ ಹೇಳಿದರು.
ಸನ್ಮಾನಿತರಾದ ಬಸ್ಸುಗೌಡ ಬಿಳ್ಹಾರ ಅವರು ತಮ್ಮ ಸಂತೋಷ ವ್ಯಕ್ತಪಡಿಸುತ್ತಾ, “ನಾನು ಜಿಲ್ಲಾಡಳಿತಕ್ಕೆ ಹೊಸ ಸೇವಾ ಮನೋಭಾವವನ್ನು ತರಲು ಶ್ರಮಿಸುತ್ತೇನೆ. ಈ ಗೌರವ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ” ಎಂದು ಹೇಳಿದರು.
ಈ ಸಂಧರ್ಭದಲ್ಲಿ ಈಶ್ವರ್ ನಾಯಕ್, ಮಲ್ಲಯ್ಯ ಮುಷ್ಟೂರ್, ಸಾಬಣ್ಣ ಜೋಗಿ, ಅಶೋಕ್ ಗಣಪುರ್, ಅಂಬಣ್ಣ ಕಲಬುರ್ಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ,