Mon. Jul 21st, 2025

ನಾನು ಹೈದರಾಬಾದ್‌ನವಳು” ಹೇಳಿಕೆ: ರಶ್ಮಿಕಾಗೆ ಕರವೇ ನಾರಾಯಣ ಗೌಡ ಕಿಡಿ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್!

ನಾನು ಹೈದರಾಬಾದ್‌ನವಳು” ಹೇಳಿಕೆ: ರಶ್ಮಿಕಾಗೆ ಕರವೇ ನಾರಾಯಣ ಗೌಡ ಕಿಡಿ, ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೋಲ್!

ಬೆಂಗಳೂರು ಮಾ ೦೨:-  ಕನ್ನಡ ಚಿತ್ರರಂಗದಲ್ಲಿ ನೆಲೆಸಿದ ನಟಿ ರಶ್ಮಿಕಾ ಮಂದಣ್ಣ ಅವರು ‘ನಾನು ಹೈದರಾಬಾದ್ ಮೂಲದವಳು’ ಎಂಬ ಹೇಳಿಕೆಯಿಂದ ವಾದವಿವಾದಗಳಿಗೆ ಕಾರಣವಾಗಿದ್ದಾರೆ. ಇತ್ತೀಚೆಗೆ ನಡೆದ ‘ಛಾವ’ ಸಿನಿಮಾದ ಕಾರ್ಯಕ್ರಮದಲ್ಲಿ ಈ ಮಾತು ಹೇಳಿದ ರಶ್ಮಿಕಾ ವಿರುದ್ಧ ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡ ಕೂಡ ಈ ಕುರಿತು ಗಂಭೀರ ಪ್ರತಿಕ್ರಿಯೆ ನೀಡಿದ್ದಾರೆ.

“ನಿಮ್ಮ ನೆಲವನ್ನು ಮರೆಯಬೇಡಿ”

ನಾರಾಯಣ ಗೌಡ ಅವರು ಈ ಕುರಿತು ಕಿಡಿಕಾರಿದ್ದಾರೆ. “ನಾನು ಇತ್ತೀಚೆಗೆ ಆಂಧ್ರ ಪ್ರದೇಶದಲ್ಲಿ ನಡೆದ ಒಂದು ಚಲನಚಿತ್ರ ಕಾರ್ಯಕ್ರಮ ವೀಕ್ಷಿಸುತ್ತಿದ್ದೆ. ಅದರಲ್ಲಿ ಕೊಡಗಿನ ಹೆಣ್ಣುಮಗಳು, ಕನ್ನಡ ಚಿತ್ರರಂಗದಿಂದ ಗುರುತಿಸಿಕೊಂಡು ಇದೀಗ ಬೇರೆ ಭಾಷೆಗಳಲ್ಲೂ ಹೆಸರು ಮಾಡಿರುವ ರಶ್ಮಿಕಾ, ತಾನು ಆಂಧ್ರ ಮೂಲದವಳಾಗಿ ಹೇಳಿಕೊಂಡರು. ಇದು ಖಂಡನೀಯ. ನೀವು ಕನ್ನಡ ಚಿತ್ರರಂಗದಿಂದ ಹೆಸರುವಾಸಿಯಾಗಿದ್ದರೆ, ಈ ನೆಲದ ಋಣವನ್ನು ಮರೆಯಬಾರದು” ಎಂದು ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್

ರಶ್ಮಿಕಾ ಮಂದಣ್ಣ ಅವರ ಈ ಹೇಳಿಕೆಯನ್ನು ಹಿಡಿದುಕೊಂಡು ಹಲವಾರು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಮ್ಮ ಚಿತ್ರರಂಗದಿಂದ ದೊಡ್ಡ ನಟಿಯಾಗಿದ್ದರೂ, ಕರ್ನಾಟಕವನ್ನು ಮರೆತರೆ ಹೇಗೆ?” ಎಂಬ ಪ್ರಶ್ನೆ ಬೇರೊಂದು ಮುಖ ಪಡೆದಿದೆ. ಕನ್ನಡ ಪ್ರೇಮಿಗಳು ತಮ್ಮ ಅಸಮಾಧಾನವನ್ನು ವಿವಿಧ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ.

“ಜನಪರ ಹೋರಾಟದಲ್ಲಿ ಸಿನಿತಾರೆಯರು ಭಾಗವಹಿಸಲಿ”

ಇತ್ತೀಚೆಗೆ, ಫಿಲ್ಮ್ ಫೆಸ್ಟಿವಲ್‌ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು “ಕನ್ನಡ ಚಿತ್ರರಂಗದ ಕಲಾವಿದರು ಜನಪರ ಹೋರಾಟಗಳಲ್ಲಿ ಭಾಗವಹಿಸುವುದು ಕಡಿಮೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಈ ಕುರಿತು ನಾರಾಯಣ ಗೌಡ ಪ್ರತಿಕ್ರಿಯಿಸುತ್ತಾ, “ಕನ್ನಡದ ಜನರು ನಿಮ್ಮ ಚಿತ್ರಗಳನ್ನು ಪ್ರೀತಿಯಿಂದ ನೋಡಬೇಕು ಅಂತ ಅಂದರೆ, ನೀವು ಕನ್ನಡಿಗರ ಪರ ಹೋರಾಟ ಮಾಡಬೇಕು. ಬೀದಿಗೆ ಬಂದು ಜನರ ಪರವಾಗಿ ನಿಲ್ಲಬೇಕು” ಎಂದು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ಮತ್ತೊಮ್ಮೆ ಕನ್ನಡಿಗರ ಆತ್ಮಗೌರವದ ಬಗ್ಗೆ ಚರ್ಚೆ ಶುರುವಾಗಿದೆ. ನಟ-ನಟಿಯರು ಕನ್ನಡ ನಾಡು, ನುಡಿಯ ಪರವಾಗಿ ನಿಲ್ಲಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಇನ್ನು ಈ ವಿವಾದಕ್ಕೆ ರಶ್ಮಿಕಾ ಮತ್ತೊಮ್ಮೆ ಸ್ಪಷ್ಟನೆ ನೀಡುವಾರಾ ಎಂಬುದು ಕಾದು ನೋಡಬೇಕಾಗಿದೆ.

 

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!