Tue. Jul 22nd, 2025

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ) ವತಿಯಿಂದ ಗುರುಮಿಟ್ಕಲ್ ಮತ್ತು ವಡಗೇರಿ ತಾಲೂಕುಗಳ ಹೊಸ ಅಧ್ಯಕ್ಷರ ನೇಮಕ

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ) ವತಿಯಿಂದ ಗುರುಮಿಟ್ಕಲ್ ಮತ್ತು ವಡಗೇರಿ ತಾಲೂಕುಗಳ ಹೊಸ ಅಧ್ಯಕ್ಷರ ನೇಮಕ

ಗುರುಮಿಟ್ಕಲ್ ಮಾ ೦೨:-

ನವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಒಕ್ಕೂಟ (ರಿ) ಜಿಲ್ಲಾಧ್ಯಕ್ಷರಾದ ಹನುಮಂತ ಮೊಟ್ಟನಳ್ಳಿ ಅವರ ಆದೇಶದ ಮೇರೆಗೆ, ಇಂದು ಗುರುಮಿಟ್ಕಲ್ ಹಾಗೂ ವಡಗೇರಿ ತಾಲೂಕುಗಳ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಿತು. ಸಭೆಯಲ್ಲಿ ಗುರುಮಿಟ್ಕಲ್ ತಾಲೂಕಿನ ಅಧ್ಯಕ್ಷರಾಗಿ ನರಸಪ್ಪ ದೊರೆ ಹಾಗೂ ವಡಗೇರಿ ತಾಲೂಕಿನ ಅಧ್ಯಕ್ಷರಾಗಿ ರವಿ ಮಡಿವಾಳ ಚನ್ನೂರ್ (ಜೆ) ಅವರನ್ನು ನೇಮಕ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಪ್ರಮುಖರಾದ ಭೀಮರಾಯ ಹತ್ತಿಕುಣಿ (ತಾಲೂಕಾ ಅಧ್ಯಕ್ಷರು), ಗೋವಿಂದ ಕೊಂಕಲ್ (ಜಿಲ್ಲಾ ಪ್ರಧಾನ ಕಾರ್ಯದರ್ಶಿ), ಅಂಬಣ್ಣ ಗೌಡಗೇರಿ, ಗೋವಿಂದಪ್ಪ ಕೊಂಕಲ್, ಶರಣಪ್ಪ ಗಾಡಿ, ಗೋವಿಂದಪ್ಪ ಯಡ್ಡಳ್ಳಿ, ವಿರುಪಾಕ್ಷಯ್ಯ ಸ್ವಾಮಿ ಮೊಟ್ಟನಳ್ಳಿ, ಭೊಜು ರಾಠೋಡ, ಖದನಸಾಬ ಹತ್ತಿಕುಣಿ, ನಾಗಪ್ಪ ಶಹಾಪೂರಕರ ಹತ್ತಿಕುಣಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು.

ಸಭೆಯಲ್ಲಿ ಸಂಘಟನೆಯ ಮಹತ್ವ, ಕಾರ್ಮಿಕರ ಹಕ್ಕುಗಳು ಮತ್ತು ಅವರ ಸುಧಾರಣೆಗೆ ಒಗ್ಗೂಡಿದಂತೆ ಶ್ರಮಿಸುವ ಅಗತ್ಯವನ್ನು ನಾಯಕರ ಸಭಿಕರು ಒತ್ತಿಹೇಳಿದರು. ಹೊಸವಾಗಿ ನೇಮಕಗೊಂಡ ತಾಲ್ಲೂಕು ಅಧ್ಯಕ್ಷರು, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಿ, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಪ್ರತಿಜ್ಞೆ ಮಾಡಿದ್ದಾರೆ.

ಈ ಸಂದರ್ಭ, ಹೊಸ ನೇಮಕಗೊಂಡ ಅಧ್ಯಕ್ಷರನ್ನು ಹೂಮಾಲೆ ಹಾಕಿ ಸನ್ಮಾನಿಸಿ, ಅವರ ಮುಂದಿನ ಕಾರ್ಯಪಥಕ್ಕೆ ಶುಭಾಶಯ ಕೋರಲಾಯಿತು. ಕಾರ್ಮಿಕರ ಹಿತ ರಕ್ಷಣೆಗೆ ಸದಾ ಎಚ್ಚರದಿಂದ ಕಾರ್ಯನಿರ್ವಹಿಸುವುದಾಗಿ ನೇಮಕಗೊಂಡ ಅಧ್ಯಕ್ಷರು ಭರವಸೆ ನೀಡಿದರು.

ನೂತನ ನೇಮಕದಿಂದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ಮೂಡಿದ್ದು, ಜಿಲ್ಲೆಯಲ್ಲಿ ಕಾರ್ಮಿಕ ಹಿತಾಸಕ್ತಿಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!