ಚಂಡೀಗಢ ಮಾ ೦೨:-
ಸುಳಿವು ನೀಡಿದ ದಾರಿಹೋಕರು ಚಂಡೀಗಢದ ಸಂಪ್ಲಾ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದ ಸೂಟ್‌ಕೇಸ್ ಕಂಡು ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು, ಸೂಟ್‌ಕೇಸ್ ತೆರೆಯಲು ಮುಂದಾದಾಗ, ಅದರೊಳಗೆ ಭಯಾನಕ ದೃಶ್ಯ ಎದುರಾಗಿದೆ. ಹಿಮಾನಿ ಶವ ಶಿರಚ್ಛೇದಿತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆಕೆಯ ತಲೆ ದುಪ್ಪಟ್ಟಾದಿಂದ ಸುತ್ತಲ್ಪಟ್ಟಿತ್ತು.
ಪೊಲೀಸರ ಪರಿಶೀಲನೆ ಮತ್ತು ಪ್ರಾಥಮಿಕ ಮಾಹಿತಿ ಸಂಪ್ಲಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿಜೇಂದರ್ ಸಿಂಗ್ ಈ ಕುರಿತು ಮಾತನಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಕೊಲೆ ಹಿಂದೆ ಯಾರ ಕೈವಾಡವಿದೆಯೋ ಎಂಬುದರ ಸುಳಿವು ಹುಡುಕುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹಿಮಾನಿ ಕೊನೆಗೂ ನೋಡಿದ ಸ್ಥಳ ಹಾಗೂ ಆಕೆಯ ಸಂಪರ್ಕ ಹೊಂದಿದ್ದವರ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ.
ರಾಜಕೀಯ ವಲಯದಿಂದ ತೀವ್ರ ಆಕ್ರೋಶ ಈ ನಿಗೂಢ ಕೊಲೆ ಪ್ರಕರಣ ರಾಜ್ಯದ ರಾಜಕೀಯ ವಲಯದಲ್ಲಿಯೂ ಭಾರೀ ಚರ್ಚೆಗೆ ಕಾರಣವಾಗಿದೆ. ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಅಪರಾಧಿಗಳಿಗೆ ತಕ್ಷಣ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದ್ದಾರೆ. “ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಈ ಹತ್ಯೆ ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿದೆ” ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಆತಂಕ ಮತ್ತು ಪ್ರಶ್ನೆಗಳು ಈ ಪ್ರಕರಣ ಜನತೆಯಲ್ಲಿ ಭಾರೀ ಆತಂಕ ಉಂಟುಮಾಡಿದ್ದು, ಮಹಿಳೆಯರ ಸುರಕ್ಷತೆಯ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಒಂದು ಮಹತ್ವಾಕಾಂಕ್ಷಿ ರಾಜಕೀಯ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಯುವತಿಯ ಅಂತ್ಯದಲ್ಲಿ ಇಂತಹ ಭಯಾನಕ ಕೊಲೆ ನಡೆಯುವುದು, ಏನು ಸಂದೇಶ ಸಾರುತ್ತದೆ ಎಂಬ ಪ್ರಶ್ನೆಗಳು ಮುಂದಾಳು ತಗೆಯುತ್ತಿದೆ.
ಪೊಲೀಸರು ಈಗ ತೀವ್ರಗತಿಯಲ್ಲಿ ತನಿಖೆ ನಡೆಸುತ್ತಿದ್ದು, ಶೀಘ್ರದಲ್ಲಿಯೇ ಕೊಲೆ ಹಿಂದೆ ಇರುವ ಸತ್ಯ ಬೆಳಕಿಗೆ ಬರಲು ನಿರೀಕ್ಷೆ ವ್ಯಕ್ತವಾಗಿದೆ. ಈ ಪ್ರಕರಣದ ಮುಂದಿನ ಬೆಳವಣಿಗೆಗಳಿಗೆ ಗಮನ ಹರಿಸಿ…