Tue. Jul 22nd, 2025

SSLC ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಹೆಚ್ಚುವರಿ ‘ಗ್ರೇಸ್ ಮಾರ್ಕ್ಸ್’ ಇಲ್ಲ: ಉತ್ತೀರ್ಣರಾಗಲು ಕನಿಷ್ಠ ಅಂಕ ಶೇ.35 ಅಗತ್ಯ..!

SSLC ವಿದ್ಯಾರ್ಥಿಗಳಿಗೆ ಈ ವರ್ಷದಿಂದ ಹೆಚ್ಚುವರಿ ‘ಗ್ರೇಸ್ ಮಾರ್ಕ್ಸ್’ ಇಲ್ಲ: ಉತ್ತೀರ್ಣರಾಗಲು ಕನಿಷ್ಠ ಅಂಕ ಶೇ.35 ಅಗತ್ಯ..!

ಬೆಂಗಳೂರು ಫೆ ೨೧:-

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ಈ ಹಿಂದೆ ಜಾರಿಗೆ ತಂದಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಈ ವರ್ಷದಿಂದ ರದ್ದು ಮಾಡಲಾಗಿದೆ. 2024ಕ್ಕೂ ಹಿಂದೆ ಇದ್ದಂತೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಶೇ.35 ಅಂಕಗಳನ್ನು ಗಳಿಸಬೇಕಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಿಕ್ಷಣ, ಗೃಹ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳು, ಉಪ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್‌ಗಳ ಸಿಇಒಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರೀಕ್ಷಾ ಸಿದ್ಧತೆಗಳನ್ನು ಪರಿಶೀಲಿಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಗ್ರೇಸ್ ಮಾರ್ಕ್ಸ್ ನೀಡುವ ಪದ್ಧತಿ ಶಿಕ್ಷಣದ ಗುಣಮಟ್ಟವನ್ನು ಹಾಳುಮಾಡುವುದು ಹಾಗೂ ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ತೊಡಕು ತರುತ್ತದೆ ಎಂಬ ಅಂಶಗಳು ವರದಿಯಾಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದರು.

ಈ ವರ್ಷದಿಂದ ಹೆಚ್ಚುವರಿ ಶೇ.10 ಗ್ರೇಸ್ ಮಾರ್ಕ್ಸ್ ಇರುವುದಿಲ್ಲ. ಆದರೆ, ಕೆಲವೇ ಅಂಕಗಳಿಂದ ಉತ್ತೀರ್ಣನಾಗುವ ಅವಕಾಶ ತಪ್ಪಿದರೆ, ಮೂರು ವಿಷಯಗಳಲ್ಲಿ ಗರಿಷ್ಠ ಶೇ.10ರಷ್ಟು ಗ್ರೇಸ್ ಅಂಕ ನೀಡುವ ವ್ಯವಸ್ಥೆ ಮುಂದುವರಿಯಲಿದೆ. ಇದರಿಂದ ಈ ಹಿಂದೆ ಒಟ್ಟಾರೆ ಶೇ.20ರಷ್ಟು ನೀಡಲಾಗುತ್ತಿದ್ದ ಗ್ರೇಸ್ ಅಂಕವನ್ನು ಈಗ ಶೇ.10ಕ್ಕೆ ಸೀಮಿತಗೊಳಿಸಲಾಗಿದೆ.

ಪಾಸಾಗಲು ಅಗತ್ಯ ಅಂಕಗಳ ನಿರ್ಧಾರ:

ಪರೀಕ್ಷೆ ಪ್ರಥಮ ಭಾಷೆ ಇತರ ವಿಷಯಗಳು ಗರಿಷ್ಠ ಗ್ರೇಸ್ ಅಂಕ ಒಟ್ಟು ಪಾಸ್ ಅಂಕ
ಎಸ್‌ಎಸ್‌ಎಲ್‌ಸಿ 35 28 10 219
ಪಿಯುಸಿ 5% 210

ಪರೀಕ್ಷಾ ಸಿದ್ಧತೆಗಳು:

ಪರೀಕ್ಷೆ ದಿನಾಂಕ ನೋಂದಾಯಿತ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳು
ಎಸ್‌ಎಸ್‌ಎಲ್‌ಸಿ ಮಾರ್ಚ್ 21 – ಏಪ್ರಿಲ್ 4 8,96,447 2,818
ಪಿಯುಸಿ ಮಾರ್ಚ್ 1 – 20 7,13,862 1,171

ಅಧಿಕಾರಿಗಳ ನಿಗಾ ಮತ್ತು ಜಾಗೃತಿ:

  • ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಪರಿಶೀಲನೆ.
  • ವೆಬ್ ಕಾಸ್ಟಿಂಗ್ ವ್ಯವಸ್ಥೆ ಮೂಲಕ ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಣೆ.
  • ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ವಿಶೇಷ ಕಾಳಜಿ ವಹಿಸಲು ಸೂಚನೆ.
  • ಹಿಜಾಬ್ ವಿಚಾರ ನ್ಯಾಯಾಲಯದ ವಿಚಾರಣೆಯಲ್ಲಿ ಇರುವ ಕಾರಣ, ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ.
  • 15,000 ಶಿಕ್ಷಕರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ.
  • ಶಾಲೆಗಳ ಸುಧಾರಣೆಗೆ 5,000 ಕೊಠಡಿಗಳು ಹಾಗೂ ಶೌಚಾಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸಲು ಮುಖ್ಯಮಂತ್ರಿ ಸಮೀಪ ಮನವಿ.

ಈ ಎಲ್ಲಾ ಕ್ರಮಗಳಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಮತ್ತು ನೈತಿಕತೆಯನ್ನು ಉತ್ತೇಜಿಸುವುದು ಸರ್ಕಾರದ ಉದ್ದೇಶ ಎಂದು ಸಚಿವರು ಸ್ಪಷ್ಟಪಡಿಸಿದರು.

 

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!