ಯಾದಗಿರಿ ಫೆ ೧೮:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಾದಗಿರಿ, ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಬೇಕು.
ಖಾಲಿ ಹುದ್ದೆಗಳ ವಿವರ:
ಹುದ್ದೆ | ಹುದ್ದೆಗಳ ಸಂಖ್ಯೆ | ಸ್ಥಳ | ವಿದ್ಯಾರ್ಹತೆ | ವೇತನ |
---|---|---|---|---|
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು | 02 | ಜಿಲ್ಲಾ ಆಸ್ಪತ್ರೆ ಯಾದಗಿರಿ | MBBS + DGO/DNB/MD(OBG) | ₹1,30,000/- |
ಮಕ್ಕಳ ತಜ್ಞ ವೈದ್ಯರು | 01 | ತಾಲೂಕು ಆಸ್ಪತ್ರೆ ಸುರಪೂರ | MBBS + DCH/DNB (Pediatrics) | ₹1,30,000/- |
ಕಿವಿ, ಮೂಗು, ಗಂಟಲು ತಜ್ಞರು | 02 | ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ | MBBS + ENT PG Degree | ₹1,10,000/- |
ವೈದ್ಯರು (NCD) | 03 | ತಾಲೂಕು ಆಸ್ಪತ್ರೆಗಳು | MBBS | ₹50,000/- |
MTTS ವೈದ್ಯರು (NUHM) | 02 | ಸುರಪೂರ, ಶಹಾಪೂರ | MBBS | ₹46,894/- |
ಡೆಂಟಲ್ ಹೈಜೆನಿಸ್ಟ್ | 01 | ಯಾದಗಿರಿ | ಡೆಂಟಲ್ ಹೈಜೀನಿಸ್ಟ್ ಡಿಪ್ಲೊಮಾ | ₹15,000/- |
ಡೆಂಟಲ್ ಟೆಕ್ನಿಷಿಯನ್ | 01 | ಯಾದಗಿರಿ | ಡೆಂಟಲ್ ಟೆಕ್ನಿಷಿಯನ್ ಡಿಪ್ಲೊಮಾ | ₹15,000/- |
ಶ್ರವಣದೋಷ ಬೋಧಕರು | 01 | ವೈದ್ಯಕೀಯ ಕಾಲೇಜು, ಯಾದಗಿರಿ | ಡಿಪ್ಲೋಮಾ (D.T.Y.D.H.H.) | ₹15,554/- |
ಅರ್ಜಿ ಸಲ್ಲಿಕೆಯ ಮುಖ್ಯ ಮಾಹಿತಿ:
- ವಯೋಮಿತಿ: ಗರಿಷ್ಠ 50 ವರ್ಷ (ಪರಿಶಿಷ್ಟ ವರ್ಗಗಳಿಗೆ ನಿಯಮಾನುಸಾರ ಸಡಿಲಿಕೆ).
- ಅರ್ಜಿದಾರರು ಶಿಕ್ಷಣ ಪ್ರಮಾಣಪತ್ರ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ ಮತ್ತು ಭಾವಚಿತ್ರವನ್ನು ಲಗತ್ತಿಸಿ ಅರ್ಜಿಯನ್ನು ಸಲ್ಲಿಸಬೇಕು.
- ಆಯ್ಕೆ ಪ್ರಕ್ರಿಯೆ ಮೆರಿಟ್ ಮತ್ತು ಮೀಸಲಾತಿ ನಿಯಮಾವಳಿಗೆ ಅನುಗುಣವಾಗಿ ನಡೆಯಲಿದೆ.
- ತಜ್ಞ ವೈದ್ಯರು ಮತ್ತು MBBS ವೈದ್ಯರಿಗಾಗಿ ಪ್ರತಿ ಮಂಗಳವಾರ ಬೆಳಿಗ್ಗೆ 11.00 ರಿಂದ ಸಂಜೆ 4.00 ಗಂಟೆಯವರೆಗೆ Walk-in-Interview ನಡೆಯಲಿದೆ.
- ಹುದ್ದೆಗಳ ಸಂಖ್ಯೆ ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಅಧಿಕಾರ ಜಿಲ್ಲಾ ಆರೋಗ್ಯ ಸಂಘ, ಯಾದಗಿರಿ ಅವರಿಗಿದೆ.
ಹೆಚ್ಚಿನ ಮಾಹಿತಿಗೆ: ಆಡಳಿತ ವೆಬ್‌ಸೈಟ್: https://yadgiri.nic.in ಅಥವಾ https://zpyadgiri.karnataka.gov.in ಅನ್ನು ಭೇಟಿ ನೀಡಿ.notification file click