Mon. Jul 21st, 2025

ಮನಸ್ಸು ಸರಿಯಿಲ್ಲವೆಂದು ಚಡಪಡಿಸ್ತಿದ್ದ ಗೃಹಿಣಿ 10 ತಿಂಗಳ ಮಗು ಬಿಟ್ಟು ಆತ್ಮಹತ್ಯೆ,

ಮನಸ್ಸು ಸರಿಯಿಲ್ಲವೆಂದು ಚಡಪಡಿಸ್ತಿದ್ದ ಗೃಹಿಣಿ 10 ತಿಂಗಳ ಮಗು ಬಿಟ್ಟು ಆತ್ಮಹತ್ಯೆ,

Yadagir: ಹಲವು ದಿನಗಳಿಂದ ನನಗೆ ಮನಸ್ಸು ಸರಿಯಾಗಿಲ್ಲವೆಂದು ಬಳಲುತ್ತಿದ್ದ ಗೃಹಿಣಿಯೊಬ್ಬಳು 10 ತಿಂಗಳ ಮಗುವನ್ನ ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಗಂಡಿ ಗ್ರಾಮದಲ್ಲಿ ನಡೆದಿದೆ.

ಕೊಂಗಂಡಿ ಗ್ರಾಮದ ಸೌಂದರ್ಯ ಮಠಪತಿ (25) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ. ಹೆರಿಗೆಯಾದ ನಂತರ 6 ತಿಂಗಳವರೆಗೆ ಸೌಂದರ್ಯ ಚೆನ್ನಾಗಿಯೇ ಇದ್ದಳು. ಆದರೆ ಮಗು 6 ತಿಂಗಳು ಆದ್ಮೇಲೆ ಗಂಡನ ಮನೆಗೆ ಬಂದಿದ್ದ ಆಕೆ ತನ್ನ ಮನಸ್ಸು ಸರಿಯಾಗಿಲ್ಲವೆಂದು ಚಡಪಡಿಸುತ್ತಿದ್ದಳು.

ಇದೇ ಕಾರಣಕ್ಕೆ 10 ತಿಂಗಳ ಮಗುವನ್ನು ತವರು ಮನೆಯಲ್ಲಿ ಬಿಟ್ಟು ಬಂದಿದ್ದಳು. ಕೊಂಗಂಡಿ ಗ್ರಾಮದ ಗಂಡನ ಮನೆಯಲ್ಲಿ ಮಾವ, ಗಂಡನೊಂದಿಗೆ ವಾಸವಾಗಿದ್ದ ಸೌಂದರ್ಯ,

ಎಂದಿನಂತೆ ಸಹಜವಾಗಿ ಇರಲಿಲ್ಲ. ಮಾನಸಿಕವಾಗಿ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ಸದ್ಯ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ.

ಈ ಬಗ್ಗೆ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!