ಯಾದಗಿರಿ : ನ ೧೯:- ಸೈದಾಪೂರ ರೈಲ್ವೇ ನಿಲ್ದಾಣದಲ್ಲಿ ಇದೇ 2024ರ ನವೆಂಬರ್ 14 ರಂದು ಒಬ್ಬ ಅಪರಿಚಿತ ಪುರುಷ ಮೃತಪಟ್ಟಿದ್ದು, ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ಯು.ಡಿ.ಆರ್ ಬಿ.ಎನ್.ಎಸ್.ಎಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ರಾಯಚೂರು ರೈಲ್ವೆ ಆರಕ್ಷಕ ಉಪ ನಿರೀಕ್ಷಕರು ವೆಂಕಟೇಶ ಅವರು ತಿಳಿಸಿದ್ದಾರೆ.
ಪುರುಷನ ಮೃತನ ಚಹರೆ ಪಟ್ಟಿ 65 ವರ್ಷ ಇದ್ದು, ಅಂದಾಜು 5 ಫೀಟ್ 2 ಇಂಚು ಎತ್ತರ ಇದ್ದು, ಉದ್ದ ಮುಖ, ಬಡಕು ದೇಹ, ತಲೆಯಲ್ಲಿ ಮೂರು ಇಂಚು ಉದ್ದದ ಕಪ್ಪು ಕೂದಲು ಮತ್ತು ಬಿಳಿ ಮೀಸೆ ಗಡ್ಡ, ಬಟೆಗಳು ಒಂದು ಕೆಂಪು ಬಣ್ಣದ ಚಡ್ಡಿ, ಬಲಗೈಯಲ್ಲಿ ಒಂದು ಕೆಂಪು ಬಣ್ಣದ ದಾರ ಧರಿಸಿರುತ್ತಾನೆ.
ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೋಲಿಕೆಯ ಪುರುಷ ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.ಸಂ.08532 231716, ಮೊ.ನಂ.9480802111, ರೈಲ್ವೆ ಪೊಲೀಸ್ ಕಂಟ್ರೋಲ್ ರೂ.080 22871291ಗೆ ಕರೆ ಮಾಡಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಆರು ತಿಂಗಳಿಂದ ಕಮಿಷನ್ ಬಾಕಿ — ನವೆಂಬರ್ ಪಡಿತರ ಎತ್ತುವಳಿ ನಿಲ್ಲಿಸಲು ವಿತರಕರ ಸಂಘದ ಎಚ್ಚರಿಕೆ
- ಯಾದಗಿರಿ ರೈತರಿಗೆ ಭಾರತ ಮಾಲಾ ಯೋಜನೆ ಬಾಧೆ — ಪರಿಹಾರ ಧನ ಹಾಗೂ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಡಾ. ಭೀಮಣ್ಣ ಮೇಟಿ ಆಗ್ರಹ
- ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ; ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಲ್ಲಪ್ಪ ಸಂಕೀನ್ ನಾಮಪತ್ರ ಸಲ್ಲಿಕೆ
- ಹಿರಿಯ ರಂಗಭೂಮಿ ಕಲಾವಿದ ಮತ್ತು ಹಾಸ್ಯನಟ ರಾಜು ತಾಳಿಕೋಟಿ ಹೃದಯಾಘಾತದಿಂದ ನಿಧನ
- ಸಾರ್ವಜನಿಕ–ಅಧಿಕಾರಿ ಸಂವಾದ ಅಗತ್ಯ: RTI ಕಾಯ್ದೆ ಪರಿಣಾಮಕಾರಿತ್ವಕ್ಕೆ ಆಯುಕ್ತ ಬದ್ರುದ್ದೀನ್ ಕರೆ

