Mon. Dec 1st, 2025

ವಕ್ಫ್ ಬೋರ್ಡ್ ಶಾಕ್: ಯಾದಗಿರಿಯ 100ಕ್ಕೂ ಹೆಚ್ಚು ಎಕರೆ ರೈತ ಭೂಮಿ ವಕ್ಫ್ ಆಸ್ತಿ ಎಂದು ದಾಖಲೆಯಾದ ದೂರು

ವಕ್ಫ್ ಬೋರ್ಡ್ ಶಾಕ್: ಯಾದಗಿರಿಯ 100ಕ್ಕೂ ಹೆಚ್ಚು ಎಕರೆ ರೈತ ಭೂಮಿ ವಕ್ಫ್ ಆಸ್ತಿ ಎಂದು ದಾಖಲೆಯಾದ ದೂರು

ಯಾದಗಿರಿ ಅ ೨೯:- ಜಿಲ್ಲೆಯ ರೈತರಿಗೆ ಇದೀಗ ವಕ್ಫ್ ಬೋರ್ಡ್ ಆಘಾತಕಾರಿ ಸುದ್ದಿ ನೀಡಿದ್ದು, 100ಕ್ಕೂ ಹೆಚ್ಚು ಎಕರೆ ರೈತ ಭೂಮಿಯನ್ನು ತಮ್ಮ ಆಸ್ತಿಯೆಂದು ವಕ್ಫ್ ಬೋರ್ಡ್ ಗುರುತಿಸಿದೆ. ಕೊಂಗಂಡಿ ಮತ್ತು ಸಗರ ಗ್ರಾಮಗಳಲ್ಲಿ ಇಂತಹ ಭೂಮಿಗಳನ್ನು ವಕ್ಫ್ ಬೋರ್ಡ್ ಆಸ್ತಿಯಾಗಿ ದಾಖಲಿಸಿರುವುದರಿಂದ ರೈತರಿಗೆ ಸರ್ಕಾರದ ಸೌಲಭ್ಯಗಳು ಸಿಗುವುದರಲ್ಲಿ ಸಮಸ್ಯೆ ಉಂಟಾಗಿದೆ.

2020ರಲ್ಲಿ ಏಕಕಾಲಕ್ಕೆ ನೂರಾರು ರೈತರ ಭೂಮಿಯನ್ನು ಪಹಣಿ ದಾಖಲೆಗಳ 11ನೇ ಕಾಲಂನಲ್ಲಿ ವಕ್ಫ್ ಬೋರ್ಡ್‌ಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಗರ ಮತ್ತು ಕೊಂಗಂಡಿ ಗ್ರಾಮಗಳ ಮಧ್ಯೆ ಹಾದು ಹೋಗುತ್ತಿರುವ ರೈಲ್ವೆ ಟ್ರ್ಯಾಕ್ ಕಾಮಗಾರಿ ಪ್ರಗತಿಯಲ್ಲಿದ್ದು, ಈ ಕಾಮಗಾರಿ ನಿರ್ಮಾಣಕ್ಕೆ ರೈತರ ಭೂಮಿಯನ್ನು ಭೂಸ್ವಾದೀನ ಮಾಡುವ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಹೆಸರು ಬಳಕೆಯಾಗಿ, ರೈತರಿಗೆ ಪರಿಹಾರದ ಹಣ ಕೂಡ ಸಿಗದೆ ನಿಂತಿದೆ.

ಈ ಸಂಬಂಧ ಪರಿಹಾರಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಂದ ಪಹಣಿ ದಾಖಲೆಯನ್ನು ಪಡೆಯಲು ರೈತರು ಹೋರಾಟ ನಡೆಸಿದಾಗ, ಪಹಣಿಯ 11ನೇ ಕಾಲಂನಲ್ಲಿ ವಕ್ಫ್ ಹೆಸರು ಕಂಡು ಬಂತು. ಇದರಿಂದ ಆತಂಕಕ್ಕೆ ಒಳಗಾದ ರೈತರು ತಕ್ಷಣವೇ ಕಾನೂನು ಮೆಟ್ಟಿಲುಹಾಕಿದ್ದು, ಕಳೆದ ಎರಡು ವರ್ಷಗಳಿಂದ ತಮ್ಮ ಹಕ್ಕಿನ ಭೂಮಿಯನ್ನು ವಕ್ಫ್ ಬೋರ್ಡ್ ಆಸ್ತಿಯಿಂದ ತೆಗೆಸಿಕೊಳ್ಳಲು ಕೋರ್ಟ್ ಮೆಟ್ಟಿಲು ತುಳಿಯುತ್ತಿದ್ದಾರೆ.

ಯಾದಗಿರಿ ಜಿಲ್ಲೆಯಲ್ಲಿ ಸುಮಾರು 1440ಕ್ಕೂ ಹೆಚ್ಚು ಜಮೀನನ್ನು ವಕ್ಫ್ ಆಸ್ತಿಯೆಂದು ಗುರುತಿಸಲಾಗಿದೆ ಎಂದು ರೈತ ಮುಖಂಡ ಲಕ್ಷ್ಮಿಕಾಂತ ಪಾಟೀಲ ಅವರು ಗಂಭೀರ ಆರೋಪ ಮಾಡಿದ್ದು, “ನಮ್ಮ ಭೂಮಿಯನ್ನು ನಮಗೆ ಹಿಂದಿರುಗಿಸದಿದ್ದರೆ ನಿರ್ದಾಕ್ಷಿಣ್ಯ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಲಾಗಿದೆ.

Related Post

Leave a Reply

Your email address will not be published. Required fields are marked *

error: Content is protected !!