ಪ್ರತಿಭಟನೆಯ ಹಿನ್ನಲೆ
ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಹಾಗೂ ಗೇಮ್‌ಗಳು ರಾಜ್ಯಾದ್ಯಂತ ಅಪಾರ ಪ್ರಮಾಣದಲ್ಲಿ ಹರಡುತ್ತಿದ್ದು, ಯುವಕರು ಮತ್ತು ವಿದ್ಯಾರ್ಥಿಗಳ ಜೀವನದ ಮೇಲೆ ದೋಷಪರಿಣಾಮ ಬೀರುತ್ತಿವೆ. ಇಂತಹ ಆಟಗಳ ಚಟಕ್ಕೆ ಮುಗುಳ್ನೀಡಿರುವವರಲ್ಲಿ ಅನೇಕರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ಚಟಗಳಿಂದಾಗಿ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಈ ಹಿನ್ನಲೆಯಲ್ಲಿ “ನಮ್ಮ ಕರ್ನಾಟಕ ಸೇನೆ” ಸಂಘಟನೆಯು ಆನ್‌ಲೈನ್ ಬೆಟ್ಟಿಂಗ್ ಗೇಮ್‌ಗಳನ್ನು ತಕ್ಷಣ ನಿಷೇಧಿಸಬೇಕೆಂದು ಪ್ರತಿಭಟನೆಗೆ ಮುಂದಾಯಿತು.
ಆನ್‌ಲೈನ್ ಬೆಟ್ಟಿಂಗ್‌ನಿಂದ ಬದುಕು ಹಾಳು
“ನಮ್ಮ ಕರ್ನಾಟಕ ಸೇನೆ” ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾ, “ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ರಮ್ಮಿ ಆಟಗಳು ಹಗಲು ದರೋಡೆ ನಡೆಸುತ್ತಿರುವಂತಿವೆ. ಅನೇಕ ಯುವಕರು ಹಾಗೂ ವಿದ್ಯಾರ್ಥಿಗಳು ಈ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇಂತಹ ಆಟಗಳಿಂದ ಯುವಕರ ಭವಿಷ್ಯ ಹಾಳಾಗುತ್ತಿದೆ” ಎಂದು ಹೇಳಿದರು.
ಪ್ರತಿಭಟನಾ ಸಮಯದಲ್ಲಿ ಒತ್ತಾಯಗಳು
ಪ್ರತಿಭಟನೆಯ ಸಂದರ್ಭದಲ್ಲಿ, “ನಮ್ಮ ಕರ್ನಾಟಕ ಸೇನೆ”ಯ ಜಿಲ್ಲಾ ಅಧ್ಯಕ್ಷರು ಮಾತನಾಡಿ, “ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ನಿಷೇಧಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ತೆಲಂಗಾಣ, ಆಂಧ್ರ, ಸಿಕ್ಕಿಂ ಮೊದಲಾದ ಅನೇಕ ರಾಜ್ಯಗಳು ಈ ಆಟಗಳನ್ನು ನಿಷೇಧಿಸಿವೆ. ನಮ್ಮ ರಾಜ್ಯದಲ್ಲೂ ಇವು ಬಗ್ಗೆಯಾದ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಿಹೇಳಿದರು.
ಸರ್ಕಾರಕ್ಕೆ ಮನವಿ
ಪ್ರತಿಭಟನೆ ಮುಗಿದ ನಂತರ, ಪ್ರತಿಭಟನಾಕಾರರು ಯಾದಗಿರಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಈ ಹಾನಿಕಾರಕ ಆಟಗಳಿಂದ ದೂರವಿಡಲು ಹಾಗೂ ಆರ್ಥಿಕ ನಷ್ಟವನ್ನು ತಪ್ಪಿಸಲು ತಕ್ಷಣವೇ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂಬುದಾಗಿ ಮನವಿ ಮಾಡಲಾಯಿತು.
ತೀವ್ರ ಹೋರಾಟದ ಎಚ್ಚರಿಕೆ
ಸರ್ಕಾರ ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳದಿದ್ದರೆ, ರಾಜ್ಯಾದ್ಯಾಂತ ಉಗ್ರ ಹೋರಾಟ ನಡೆಸುವುದಾಗಿ “ನಮ್ಮ ಕರ್ನಾಟಕ ಸೇನೆ” ಕಾರ್ಯಕರ್ತರು ಎಚ್ಚರಿಸಿದರು.
- ಯಾದಗಿರಿ ಎಸ್ಎಸ್ಎಲ್ಸಿ ಫಲಿತಾಂಶ ಮತ್ತೆ ಕೊನೆ ಸ್ಥಾನ: ಶಿಕ್ಷಕರಿಗೆ ನೋಟಿಸ್
- ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ
- ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!
- ಹೋನಗೇರಾ ಶಾಲೆಯ ದುಸ್ಥಿತಿ: ಶಿಥಿಲ ಕಟ್ಟಡ, ಸೌಲಭ್ಯಗಳ ಕೊರತೆ ನಡುವೆ ಜೀವ ಭಯದಲ್ಲಿ ನೂರಾರು ಮಕ್ಕಳ ಶಿಕ್ಷಣ
- ನದಿಗೆ ತಳ್ಳಿದ ಪ್ರಕರಣಕ್ಕೆ ಹೊಸ ತಿರುವು – ಪತಿ-ಪತ್ನಿ ಸಂಬಂಧಕ್ಕೆ ವಿಚ್ಛೇದನ ಅಂತ್ಯ