ಕೊಡೇಕಲ್ ಗ್ರಾಮದಲ್ಲಿ ಆಘಾತ ಮೂಡಿಸಿದ ಘಟನೆ
ಯಾದಗಿರಿ ಸೆ ೨೯:- ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕೊಡೇಕಲ್ ಗ್ರಾಮದಲ್ಲಿ ಅಂಗನವಾಡಿ ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರವನ್ನು ಕದ್ದಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಘಟನೆ ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ. ಮಕ್ಕಳ ಪೌಷ್ಟಿಕಾಹಾರ ಪದಾರ್ಥಗಳನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಅಂಗನವಾಡಿ ಶಿಕ್ಷಕಿ ಸುಭದ್ರಾ ಕುಲಕರ್ಣಿ ವಿರುದ್ಧ ಗ್ರಾಮಸ್ಥರು ಕಿಡಿ ಕಾರಿದ್ದಾರೆ.
ಆಹಾರ ಸಾಮಗ್ರಿಗಳ ಅಕ್ರಮ ಸಂಗ್ರಹಣೆ
ಕೊಡೇಕಲ್ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ-1ಕ್ಕೆ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆಗಾಗಿ ಸರ್ಕಾರದಿಂದ ಪ್ರತಿ ತಿಂಗಳು ಅಕ್ಕಿ, ಬೆಲ್ಲ, ಬೆಳೆ ಮತ್ತು ಹಾಲಿನ ಪೌಡರ್ ಮುಂತಾದ ಪದಾರ್ಥಗಳು ಬಂದಿದ್ದು, ಅವುಗಳನ್ನು ಮಕ್ಕಳು ಬದಲು ಸ್ವತಃ ಮನೆಯಲ್ಲಿ ಶೇಖರಿಸಿದ್ದ ಶಿಕ್ಷಕಿ ಸುಭದ್ರಾ ಕುಲಕರ್ಣಿ ಅವರ ಅಕ್ರಮಗಳು ಬೆಳಕಿಗೆ ಬಂದಿವೆ.
ಗ್ರಾಮಸ್ಥರಿಂದ ಆಕ್ರೋಶ
ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಆಹಾರ ನೀಡುವ ಬದಲು, ಈ ಆಹಾರವನ್ನು ಸ್ವಂತ ಮನೆಯಲ್ಲಿ ಕಾದಿರಿಸಿದ್ದ ವಿಷಯ ತಿಳಿದು ಗ್ರಾಮಸ್ಥರು ಶಿಕ್ಷಕಿಯನ್ನು ಎದುರಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳು ಬಡವ ವರ್ಗಕ್ಕೆ ಸೇರಿರುವುದರಿಂದ, ಅವರಿಗೆ ಸರಿಯಾಗಿ ಆಹಾರ ನೀಡದಿರುವ ಶಿಕ್ಷಕಿಯ ವರ್ತನೆ ಬೇಸರ ಮೂಡಿಸಿದೆ. ಸ್ಥಳೀಯ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿದಾಗ, ಪೌಷ್ಟಿಕಾಹಾರ ತಯಾರಾತ್ಯಂತ ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ.
ಅಧಿಕಾರಿಗಳ ಶಾಕ್
ಈ ಘಟನೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ತಕ್ಷಣ ಗಮನಹರಿಸಿದ್ದು, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ನಂತರ, ಅಕ್ಕಿ, ಬೆಲ್ಲ, ಹಾಲಿನ ಪೌಡರ್ ಸೇರಿದಂತೆ ಎಲ್ಲಾ ಪೌಷ್ಟಿಕ ಆಹಾರ ಸಾಮಗ್ರಿಗಳನ್ನು ಶಿಕ್ಷಕಿಯ ಮನೆಯಲ್ಲಿ ಕಂಡು ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಈ ಅಕ್ರಮವು ಹಲವು ತಿಂಗಳಿನಿಂದ ನಡೆಯುತ್ತಿದ್ದರೆಂಬ ಶಂಕೆ ವ್ಯಕ್ತವಾಗಿದೆ.
ಶಿಸ್ತು ಕ್ರಮಕ್ಕೆ ಒತ್ತಾಯ
ಈ ಘಟನೆ ನಂತರ ಗ್ರಾಮಸ್ಥರು ಮಕ್ಕಳಿಗೆ ನ್ಯಾಯ ನೀಡಲು ಶಿಕ್ಷಕಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಬಳಿ ಒತ್ತಾಯಿಸಿದ್ದಾರೆ. “ಅಂಗನವಾಡಿ ಮಕ್ಕಳ ಪೌಷ್ಟಿಕ ಆಹಾರವನ್ನು ಕದ್ದಿರುವುದು ಅಸಹ್ಯಕರ ಕೃತ್ಯವಾಗಿದೆ. ಶಿಕ್ಷಕಿಗೆ ಕೂಡಲೇ ಶಿಕ್ಷೆ ವಿಧಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸಂಬಂಧಿಸಿದ ಶಿಕ್ಷಣ ಇಲಾಖೆ ಮತ್ತು ಅಂಗನವಾಡಿ ಯೋಜನಾ ಅಧಿಕಾರಿಗಳು ಶಿಕ್ಷಕಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
- ಯಾದಗಿರಿ ಎಸ್ಎಸ್ಎಲ್ಸಿ ಫಲಿತಾಂಶ ಮತ್ತೆ ಕೊನೆ ಸ್ಥಾನ: ಶಿಕ್ಷಕರಿಗೆ ನೋಟಿಸ್
- ಪತ್ನಿಯೇ ನದಿಗೆ ತಳ್ಳಿದ್ದಾಳೆಂದು ಆರೋಪಿಸಿದ್ದ ತಾತಪ್ಪನಿಗೆ ಮತ್ತೊಂದು ಶಾಕ್: ಬಾಲ್ಯವಿವಾಹ ಆರೋಪದಲ್ಲಿ ಸಂಕಷ್ಟ
- ಕೋಟ್ಯಾಂತರ ರೂ. ಖರ್ಚಾದರೂ ಕ್ರೀಡಾಂಗಣ ದರಿದ್ರಾವಸ್ಥೆ: ಯಾದಗಿರಿಯಲ್ಲಿ ಅನುದಾನ ಲೂಟಿ ಆರೋಪ!
- ಹೋನಗೇರಾ ಶಾಲೆಯ ದುಸ್ಥಿತಿ: ಶಿಥಿಲ ಕಟ್ಟಡ, ಸೌಲಭ್ಯಗಳ ಕೊರತೆ ನಡುವೆ ಜೀವ ಭಯದಲ್ಲಿ ನೂರಾರು ಮಕ್ಕಳ ಶಿಕ್ಷಣ
- ನದಿಗೆ ತಳ್ಳಿದ ಪ್ರಕರಣಕ್ಕೆ ಹೊಸ ತಿರುವು – ಪತಿ-ಪತ್ನಿ ಸಂಬಂಧಕ್ಕೆ ವಿಚ್ಛೇದನ ಅಂತ್ಯ