ಯಾದಗಿರಿ, ಸೆ ೨೩:- ಯಾದಗಿರಿ ಜಿಲ್ಲೆಯಲ್ಲಿ ಸಾಯಂಕಾಲ ಸಮಯದಲ್ಲಿ ಸುರಿದ ಮಳೆಯಿಂದ ತೀವ್ರ ಅನಾಹುತ ಸಂಭವಿಸಿದೆ. ಗುಡುಗು ಸಹಿತ ಬಿರುಗಾಳಿ ಮಳೆಯಿಂದಾಗಿ ಸಿಡಿಲು ಬಡಿದು ಮೂವರು ವ್ಯಕ್ತಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಜೀನಕೇರ ತಾಂಡದಲ್ಲಿ ನಡೆದಿದೆ. ಈ ದುರ್ಘಟನೆ ಸ್ಥಳೀಯರಲ್ಲಿ ತೀವ್ರ ದುಃಖವನ್ನುಂಟುಮಾಡಿದೆ.
ಸಾವಿನ ದುರ್ದೈವಿಗಳು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ಅನಾಹುತ ಸಂಭವಿಸಿದೆ. ಸಾವನ್ನಪ್ಪಿದವರನ್ನು ಚೇನು (22), ಕಿಶನ್ (30), ಮತ್ತು ಸುಮಿಬಾಯಿ (30) ಎಂದು ಗುರುತಿಸಲಾಗಿದೆ. ಇನ್ನು, ಮೂವರು ತೀವ್ರವಾಗಿ ಗಾಯಗೊಂಡು ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
- ಮಾನವೀಯತೆಯ, ಒಂದೇ ನ್ಯಾಯದ,ವಿಶ್ವದ ಏಕೈಕ ಭಾರತೀಯ ಸಂವಿಧಾನ, ರಾಘವೇಂದ್ರ ಡಿ. ಅಭಿಮತ
- ದುರ್ಗಾದೇವಿ ದೇವಸ್ಥಾನದಲ್ಲಿ ೭೭ನೇ ಗಣರಾಜ್ಯೋತ್ಸವ ಆಚರಣೆ
- ಕನ್ಸಲ್ಟಿಂಗ್ ಸಿವಿಲ್ ಇಂಜೀನಿಯರ್ ಹಾಗೂ ಲಯನ್ಸ್ ಕ್ಲಬ್ ವತಿಯಿಂದ 77 ನೇ ಗಣರಾಜ್ಯೋತ್ಸವ ಆಚರಣೆ
- ಪತ್ರಿಕಾ ಭವನದಲ್ಲಿ ಗಣರಾಜ್ಯೋತ್ಸವ ಸಂಭ್ರಮ; ದೇಶ ನಿರ್ಮಾಣದ ಹೊಣೆಗಾರಿಕೆ ವಹಿಸೋಣ – ಸಂಕೀನ್
- ಯಾದಗಿರಿಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮಂಜೂರಿಗೆ ಆಗ್ರಹ: ಶಾಸಕರಿಗೆ ಮನವಿ ಸಲ್ಲಿಸಿದ ನಮ್ಮ ಕರ್ನಾಟಕ ಸೇನೆ

