Tue. Jul 22nd, 2025

ಯಾದಗಿರಿ ಜಿಲ್ಲಾ ಘಟಕದ ಆಟೋ ಚಾಲಕರು ಪ್ರಜಾ ಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿದರು

ಯಾದಗಿರಿ ಜಿಲ್ಲಾ ಘಟಕದ ಆಟೋ ಚಾಲಕರು ಪ್ರಜಾ ಪ್ರಭುತ್ವ ದಿನಾಚರಣೆಯಲ್ಲಿ ಭಾಗವಹಿಸಿದರು

ಸೆ ೧ ೬:

ಯಾದಗಿರಿ, 15-09-2024: ಕರ್ನಾಟಕ ರಾಜ್ಯ ಚಾಲಕರ ಪರಿಷತ್ತಿನ ಯಾದಗಿರಿ ಆಟೋ ಚಾಲಕರ ಜಿಲ್ಲಾ ಘಟಕವು ಪ್ರಜಾ ಪ್ರಭುತ್ವ ದಿನಾಚರಣೆ ಅಂಗವಾಗಿ, ಜಿಲ್ಲಾಧಿಕಾರಿಗಳ ಆದೇಶದಂತೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯ (ಆರ್‌ಟಿಓ) ಸಹಕಾರದೊಂದಿಗೆ ಸಮಾರಂಭವನ್ನು ಯಶಸ್ವಿಯಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ, ನೂರಕ್ಕೂ ಹೆಚ್ಚು ಆಟೋ ಚಾಲಕರು ತಮ್ಮ ಸಕ್ರಿಯ ಭಾಗವಹಿಸಿಕೊಳ್ಳುವ ಮೂಲಕ ಜವಾಬ್ದಾರಿ ಮತ್ತು ಪ್ರಜ್ಞಾವಂತರಾಗಿದ್ದಾರೆ ಎಂಬ ಸಂದೇಶವನ್ನು ಸಾರಿದರು.

ಪ್ರಜಾ ಪ್ರಭುತ್ವ ದಿನಾಚರಣೆಯ ಸಂದರ್ಭದಲ್ಲಿ, ಯಾದಗಿರಿ ಜಿಲ್ಲೆಯ ಪ್ರಮುಖ ಆಟೋ ಚಾಲಕರಾದ ಹಿರಿಯರು, ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಸಹಕಾರದಿಂದ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 90ಕ್ಕೂ ಹೆಚ್ಚು ಆಟೋ ಚಾಲಕರು, ಕರ್ನಾಟಕ ರಾಜ್ಯ ಚಾಲಕರ ಪರಿಷತ್ತಿನ ಅಡಿಯಲ್ಲಿ ಸಮಾರಂಭದಲ್ಲಿ ಭಾಗವಹಿಸಿ, ಸಾಮಾಜಿಕ ಜವಾಬ್ದಾರಿಯನ್ನು ಹೊಂದಿರುವ ಚಾಲಕರ ಭವಿಷ್ಯದ ಬಗ್ಗೆ ಚಿಂತನೆ ಮಾಡಿದಂತಾಗಿದೆ.

ಪ್ರಜಾ ಪ್ರಭುತ್ವ ದಿನದ ಆಚರಣೆ:

ಪ್ರಾದೇಶಿಕ ಸಾರಿಗೆ ಕಚೇರಿಯ (ಆರ್‌ಟಿಓ) ಸಲಹೆಯ ಮೇರೆಗೆ, ಎಲ್ಲ ಆಟೋ ಚಾಲಕರೂ ಸಮರ್ಪಕ ವೇಷಭೂಷಣದಲ್ಲಿ, ತಮ್ಮ ವಾಹನಗಳನ್ನು ಸ್ವಚ್ಛಗೊಳಿಸಿ, ಸರಿಯಾದ ಮಾರ್ಗಸೂಚಿಗಳನ್ನು ಪಾಲನೆ ಮಾಡಿದರು. ಈ ಮೂಲಕ, ಸಾರ್ವಜನಿಕರಿಗೆ ಉತ್ತಮ ಮತ್ತು ಸುರಕ್ಷಿತ ಸಾರಿಗೆ ಸೇವೆಗಳನ್ನು ನೀಡುವಲ್ಲಿ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

ಈ ಮಹತ್ವದ ಕಾರ್ಯಕ್ರಮವು, ಪ್ರಾದೇಶಿಕ ಸಾರಿಗೆ ಕಚೇರಿಯ ಸಹಯೋಗದಲ್ಲಿ, ಆಟೋ ಚಾಲಕರ ಹಕ್ಕುಗಳ ಮತ್ತು ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸಿತು.

ಈ ಸಂದರ್ಭದಲ್ಲಿ ಭಾಗಿಯಾಗಿರುವಂತ ಚಾಲಕರು:
ಹಿರಿಯ ಚಾಲಕರಾದ ಬಾಗಪ್ಪ ರಾಗಿರ ಅಧ್ಯಕ್ಷರು ಲಕ್ಷ್ಮಣ ಚೌಹಾನ್ ಉಪಾಧ್ಯಕ್ಷರಾದ ಶಿವ ಶರಣಪ್ಪ ಕುಂಬಾರ ಖಜನ್ಸಿ ಹಣಮಯ್ಯ ಕಲಾಲ್ ಹಾಗೂ ಈಶ್ವರ್ ನಾಯಕ್ ಸಾಬಯ್ಯ ತಾಂಡೂಲ್ಕರ್ ಹುಸೇನಿ ಚಾಮನಹಳ್ಳಿ ಹಣಮಂತ ಬಬಲಾದಿ ಮರಗಪ್ಪ ನಾಯಕ್ ಆಶಪ್ಪ ಜಟ್ಟಿ ಮಲ್ಲಯ್ಯ ಮುಸ್ಟೂರು ಮೌನೇಶ್ ಮಡಿವಾಳ ಮಹೇಶ್ ನಾಟೇಕರ್ ಅಂಬುಜಿ ರಾವ್ ಜಲಾಲ್ ದರ್ಜೆ. ಗಾಲಿಬ್ ವಾಲ್ಮೀಕಿ ಚೌಹಾಣ್ ಅಮರ್ ಚವಾಣ್ ವಾಲ್ಮೀಕಿ ಸೋಮ ರಾಥೋಡ್ ವೀರ ಸಿಂಗ್ ಚೌಹಾನ್ ರಾಜು ಚೌಹಾಣ್ ಪ್ರವೀಣ್ ರಾಠೋಡ್ ದೇವು

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!