Tue. Jul 22nd, 2025

ಅಕ್ರಮವಾಗಿ BPL ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು!

ಅಕ್ರಮವಾಗಿ BPL ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು!

ಸೆ ೦೬: ಅಕ್ರಮವಾಗಿ BPL ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದ್ದು, ನಕಲಿ ದಾಖಲೆ ಸಲ್ಲಿಸಿ BPL (ಬಿಎಪಿಎಲ್) ಕಾರ್ಡ್ ಪಡೆದವರ ಮೇಲೆ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸೂಚನೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ರಾಜ್ಯದಲ್ಲಿ ನಡೆಯುತ್ತಿರುವ BPL ಕಾರ್ಡ್‌ಗಳ ಅಕ್ರಮಗಳನ್ನು ತಕ್ಷಣ ತಪ್ಪಿಸಬೇಕು ಎಂಬುದು ಕುರಿತ ಮನವಿ ಮಾಡಿದ್ದರು. ಈ ಹಿನ್ನೆಲೆ ಸರ್ಕಾರವು ಅಕ್ರಮವಾಗಿ BPL ಕಾರ್ಡ್ ಪಡೆದುಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

ನಕಲಿ ದಾಖಲೆಗಳ ಆಧಾರದ ಮೇಲೆ BPL ಕಾರ್ಡ್ ಪಡೆದವರಿಂದ ಇದುವರೆಗೆ ನ್ಯಾಯಬೆಲೆ ಅಂಗಡಿಗಳಿಂದ ಉಚಿತ ಅಥವಾ ಕಡಿಮೆ ಬೆಲೆಯಲ್ಲಿ ಪಡೆದಿರುವ ಅಕ್ಕಿ, ಗೋಧಿ, ಇತರ ಧಾನ್ಯಗಳ ಮೌಲ್ಯವನ್ನು ಮರಳಿ ಸರ್ಕಾರಕ್ಕೆ ತಲುಪಿಸುವಂತೆ ಸೂಚನೆ ನೀಡಲಾಗಿದೆ. ಜೊತೆಗೆ ಈ ಅವ್ಯವಸ್ಥೆಗಿಂತಲೂ ದೊಡ್ಡ ಶಾಕ್ ಎಂದರೆ, ಅಕ್ರಮವಾಗಿ BPL ಕಾರ್ಡ್ ಪಡೆದುಕೊಂಡಿರುವವರು ಮಾತ್ರ ಧನ ಮಾತ್ರವಲ್ಲ, ಪರಿಷ್ಕೃತ ದಂಡ ವಿಧಿಸಲು ಉದ್ದೇಶಿಸಲಾಗಿದ್ದು, ತಪ್ಪಿತಸ್ಥರಿಗೆ ಕ್ರಿಮಿನಲ್ ಪ್ರಕರಣವೂ ದಾಖಲಿಸುವ ಸಾಧ್ಯತೆ ಇದೆ. ಇದರಿಂದ ಅವರು ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

ಅಕ್ರಮ BPL ಕಾರ್ಡ್‌ಗಳ ತಪಾಸಣಾ ಕಾರ್ಯವನ್ನು ಸರ್ಕಾರವು ತೀವ್ರಗೊಳಿಸಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ತನಿಖೆ ಪ್ರಾರಂಭವಾಗಿದೆ. ಸರ್ಕಾರದ ಅಂತಿಮ ನಿರ್ಧಾರದ ಪ್ರಕಾರ, ನಕಲಿ ಬಿಪಿಎಲ್ ಕಾರ್ಡ್ ಪಡೆಯಲು ಸಹಾಯ ಮಾಡಿದವರನ್ನು ಕೂಡಾ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸರ್ಕಾರವು ಈ ಕ್ರಮವನ್ನು ಕೈಗೊಳ್ಳುವುದರ ಕಾರಣ ಏನೆಂದರೆ, ಬಿಪಿಎಲ್ ಕಾರ್ಡ್‌ಗಳು ನಿಜವಾದ ಬಡವರಿಗೆ ತಲುಪಬೇಕು. ಆದರೆ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದವರು ನಿಜವಾಗಿ ಬಡವರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಈ ಕಾರಣಕ್ಕಾಗಿ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಅಕ್ರಮವಾಗಿ BPL ಕಾರ್ಡ್ ಪಡೆದಿರುವವರ ಮೇಲೆ ಯಾವುದೇ ರೀತಿಯ ಸಹಾನುಭೂತಿ ಇರುವುದಿಲ್ಲ. ಸರ್ಕಾರವು ಬಡವರನ್ನು ಪ್ರೋತ್ಸಾಹಿಸಲು ಹಾಕಿಕೊಂಡಿರುವ ಯೋಜನೆಗಳು ಕೇವಲ ನಿಜವಾದ ಹಕ್ಕುದಾರರಿಗಾಗಿ. ನಾವು ಈ ಅಕ್ರಮಗಳಿಗೆ ಕಡಿವಾಣ ಹಾಕುತ್ತೇವೆ” ಎಂದು ಹೇಳಿದ್ದಾರೆ.

ನಕಲಿ BPL ಕಾರ್ಡ್‌ಗಳ ತಪಾಸಣೆಗಾಗಿ ವಿಶೇಷ ಸಮಿತಿಗಳು ರಚನೆಗೊಂಡಿದ್ದು, ಸದ್ಯದಲ್ಲೇ ಅವರು ತನಿಖಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ.

ಇದನ್ನು ಓದಿ : ನವೋದಯ ವಿದ್ಯಾಲಯ 6ನೇ ತರಗತಿ ಪ್ರವೇಶ ಪರೀಕ್ಷೆ 2025-26: ಅರ್ಜಿ ಆಹ್ವಾನ

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!