Mon. Jul 21st, 2025

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳ: ವಾಣಿಜ್ಯ ಸಿಲಿಂಡರ್‌ ದುಬಾರಿಯಾಗಿದರೂ, ಗೃಹ ಸಿಲಿಂಡರ್ ಬೆಲೆ ಸ್ಥಿರ

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಹೆಚ್ಚಳ: ವಾಣಿಜ್ಯ ಸಿಲಿಂಡರ್‌ ದುಬಾರಿಯಾಗಿದರೂ, ಗೃಹ ಸಿಲಿಂಡರ್ ಬೆಲೆ ಸ್ಥಿರ

ಆ ೦೧:

ಜನತೆಗೆ ಆಘಾತ ನೀಡುವ ಸುದ್ದಿ,ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಇಂದಿನಿಂದ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಬದಲಾಯಿಸಿವೆ. ಆಗಸ್ಟ್ 1 ರಿಂದ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 8.50 ರೂ. ಏರಿಕೆಯಾಗಿದೆ. ಆದರೆ, ಸಮಾಧಾನದ ಸಂಗತಿ ಎಂದರೆ ಗೃಹ ಬಳಕೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿರುವುದು.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ವೆಬ್‌ಸೈಟ್ ಪ್ರಕಾರ, ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಈಗ 1652.50 ರೂ.ಗೆ ಲಭ್ಯವಿದೆ. ಮೊದಲು ಈ ಬೆಲೆ 1646 ರೂ. ಇತ್ತು, ಹಾಗಾಗಿ ಇಲ್ಲಿ 6.50 ರೂ. ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಬೆಲೆ ಈಗ 1764.50 ರೂ. ಇದೆ. ಚೆನ್ನೈನಲ್ಲಿ 1817 ರೂ. ಆಗಿದೆ. ಮುಂಬೈನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆ 1606.50 ರೂ.ಗೆ ತಲುಪಿದೆ.

14 ಕೆಜಿಯ ಗೃಹಬಳಕೆಯ ಗ್ಯಾಸ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಈ ಸಿಲಿಂಡರ್ 803 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಬೆಲೆ 829 ರೂ. ಮುಂಬೈನಲ್ಲಿ 802.50 ರೂ. ಮತ್ತು ಚೆನ್ನೈನಲ್ಲೂ 818.50 ರೂ. ಇದೆ. ಮಹಿಳಾ ದಿನದಂದು ಈ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಕೇಂದ್ರ ಸರ್ಕಾರ ಕಡಿಮೆ ಮಾಡಿದ್ದು, ಪ್ರತಿ ಸಿಲಿಂಡರ್ ಬೆಲೆ 100 ರೂ. ಇಳಿಕೆಯಾಗಿತ್ತು. ಇದರ ಬಳಿಕ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಜೂನ್‌ನಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 19 ರೂ. ಏರಿಕೆಯಾಗಿತ್ತು. ಮೇ 1 ರಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ 19 ರೂಪಾಯಿ ಇಳಿಕೆಯಾಗಿತ್ತು. ಏಪ್ರಿಲ್‌ಗೂ ಮುನ್ನ ಸತತ ಮೂರು ತಿಂಗಳಿನಿಂದ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ ಏರಿಕೆಯಾಗಿತ್ತು.

ಈ ಬೆಲೆ ಏರಿಕೆಯಿಂದ ಯಾದಗಿರಿ, ಬೆಂಗಳೂರು, ಮೈಸೂರಿನಂತಹ ನಗರಗಳಲ್ಲಿ ವ್ಯಾಪಾರಸ್ಥರು ಮತ್ತು ವ್ಯಾಪಾರ ಸಂಸ್ಥೆಗಳು ತೀವ್ರ ಸಮಸ್ಯೆ ಎದುರಿಸಬೇಕಾಗಿದೆ. ಅಂದಾಜು 19 ಕೆಜಿ ಸಿಲಿಂಡರ್ ಬಳಕೆಯು ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಮತ್ತು ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಹೆಚ್ಚು ಇರುವುದರಿಂದ ಈ ಬೆಲೆ ಏರಿಕೆ ವ್ಯಾಪಾರದಲ್ಲಿ ತೊಂದರೆಯಾಗಿ ಪರಿಣಮಿಸಿದೆ.

ವ್ಯಾಪಾರಸ್ಥರು ಮತ್ತು ಗ್ರಾಹಕರು ಈ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದಾರೆ. ಇದರಿಂದಾಗಿ ವ್ಯಾಪಾರದಲ್ಲಿ ದೊಡ್ಡ ಮಟ್ಟದ ದುಡ್ಡು ಖರ್ಚು ಮಾಡಬೇಕಾಗುತ್ತಿದೆ. ಗೃಹ ಬಳಕೆದಾರರು ಈ ಬೆಲೆ ಏರಿಕೆಯು ತಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವಿಷಯದಲ್ಲಿ ಖುಷಿಯಲ್ಲಿದ್ದಾರೆ.

ಈ ಬೆಲೆ ಏರಿಕೆ ವಿರುದ್ಧ ವ್ಯಾಪಾರಸ್ಥರು ಮತ್ತು ಗ್ರಾಹಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರವು ಈ ನಿರ್ಣಯವನ್ನು ಹಿಂತೆಗೆದು, ಬೆಲೆ ಸ್ಥಿರವಾಗಿರಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!