Mon. Jul 21st, 2025

ಕೃಷ್ಣ ನದಿ ನೀರಿನಿಂದ ಯಾದಗಿರಿಯಲ್ಲಿ ಪ್ರವಾಹ ಹಿನ್ನಲೆ: ಪ್ರವಾಹ ಪೀಡಿತ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ

ಕೃಷ್ಣ ನದಿ ನೀರಿನಿಂದ ಯಾದಗಿರಿಯಲ್ಲಿ ಪ್ರವಾಹ ಹಿನ್ನಲೆ: ಪ್ರವಾಹ ಪೀಡಿತ ಪ್ರದೇಶಕ್ಕೆ ಬಿಜೆಪಿ ತಂಡ ಭೇಟಿ

ಯಾದಗಿರಿ ಜು ೩೧:

ಕೃಷ್ಣ ನದಿಗೆ ನೀರು ಬಿಡಲಾಗಿದೆ, ಇದರ ಪರಿಣಾಮವಾಗಿ ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಭಾರೀ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಕೊಳ್ಳೂರು ಬಳಿಯ ಸೇತುವೆ ನೀರಿನಲ್ಲಿ ಮುಳುಗಡೆಯಾಗಿದೆ. ಈ ಪ್ರದೇಶಕ್ಕೆ ಭೇಟಿ ನೀಡಲು ಬಿಜೆಪಿಯ ಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ.

ನಾರಾಯಣಸ್ವಾಮಿ ಅವರ ನೇತೃತ್ವದ ತಂಡ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸ್ಥಳೀಯ ರೈತರೊಂದಿಗೆ ಸಮಾಲೋಚನೆ ನಡೆಸಿ, ಅವರ ಸಂಕಷ್ಟವನ್ನು ಆಲಿಸಿದೆ. ಪ್ರವಾಹದಿಂದ ಉಂಟಾದ ನಷ್ಟವನ್ನು ಪರಿಶೀಲಿಸಲು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ನಾರಾಯಣಸ್ವಾಮಿ ತಂಡವು ಶಹಾಪುರ ತಾಲೂಕಿನ ಕೊಳ್ಳೂರು ಬಳಿಯ ಮುಳುಗಡೆಯಾದ ಸೇತುವೆಯನ್ನು ವೀಕ್ಷಣೆ ಮಾಡಿದ್ದು. ಈ ಸಂದರ್ಭದಲ್ಲಿ, ನಾರಾಯಣಸ್ವಾಮಿ ಮತ್ತು ಅವರ ತಂಡವು ಜಲಾವೃತಗೊಂಡ ಜಮೀನುಗಳನ್ನು ಭೇಟಿ ಮಾಡಿ, ರೈತರೊಂದಿಗೆ ಸಮಾಲೋಚನೆ ನಡೆಸಿತು.

ನಾರಾಯಣಸ್ವಾಮಿ ಅವರ ಈ ಭೇಟಿ ಸಂದರ್ಭದಲ್ಲಿ, ಪ್ರವಾಹದಿಂದ ನಷ್ಟ ಅನುಭವಿಸಿರುವ ರೈತರು ತಮ್ಮ ಸಮಸ್ಯೆಗಳನ್ನು ಅವರ ಮುಂದೆ ತೋಡಿಕೊಂಡರು. ರೈತರು ಬೆಳೆದ ಬೆಳೆಗಳು, ಜಮೀನುಗಳು ನೀರಿನಲ್ಲಿ ಮುಳುಗಡೆಯಾಗಿರುವುದರಿಂದ ಉಂಟಾದ ಸಂಕಷ್ಟವನ್ನು ವಿವರಿಸಿದರು. ಈ ವೇಳೆ ನಾರಾಯಣಸ್ವಾಮಿ ಅವರು ರೈತರಿಗೆ ಸೂಕ್ತ ಪರಿಹಾರ ದೊರಕಿಸುವ ಬಗ್ಗೆ ಭರವಸೆ ನೀಡಿದರು.

ಇದನ್ನು ಓದಿ :ಸುರಪುರದಲ್ಲಿ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರಿದು: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

ಬಳಿಕ, ವಡಗೇರ ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿಯೂ ಪ್ರವಾಹ ಪೀಡಿತ ಜಮೀನುಗಳನ್ನು ಭೇಟಿ ಮಾಡಲಾಯಿತು. ಈ ಪ್ರದೇಶದಲ್ಲಿಯೂ ರೈತರು ತಮ್ಮ ಬೆಳೆಗಳು, ಜಮೀನುಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವ ಬಗ್ಗೆ ತಮ್ಮ ದುಃಖವನ್ನು ಹಂಚಿಕೊಂಡರು.

ನಾರಾಯಣಸ್ವಾಮಿ ಮತ್ತು ಅವರ ತಂಡವು ಪ್ರವಾಹ ಪೀಡಿತ ಪ್ರದೇಶಗಳ ಜನರ ಕಷ್ಟಗಳನ್ನು ಆಲಿಸಿ, ತಕ್ಷಣದ ಪರಿಹಾರ ಕಾರ್ಯಗಳನ್ನು ನಡೆಸಲು ಸರ್ಕಾರಕ್ಕೆ ಮನವಿ ಮಾಡಿದರು. ಪ್ರವಾಹದಿಂದ ಬಾಧಿತ ರೈತರು ಮತ್ತು ಗ್ರಾಮಸ್ಥರು ಸರ್ಕಾರದಿಂದ ತಕ್ಷಣದ ಪರಿಹಾರ ಮತ್ತು ಸಹಾಯ ದೊರಕುವ ಬಗ್ಗೆ ನಿರೀಕ್ಷೆ ಹೊಂದಿದ್ದಾರೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಾರಾಯಣಸ್ವಾಮಿ ಅವರ ತಂಡವು ಈ ಭಾಗದಲ್ಲಿ ಸ್ಥಿತಿ ಗತಿಗಳ ಮೇಲೆ ಸಮಗ್ರ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿದೆ. ಇದರಿಂದಾಗಿ, ಪ್ರವಾಹದಿಂದಾದ ನಷ್ಟದ ಪರಿಗಣನೆ ನಡೆಸಿ, ಸರಿಯಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಹಾಯಕವಾಗಲಿದೆ.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!