Tue. Jul 22nd, 2025

ಅನಧಿಕೃತ ಆಟೋ ಮಾರಾಟ: RTO ಗೆ ದೂರು ನೀಡಿದ ಯಾದಗಿರಿ ಆಟೋ ಚಾಲಕರ ಸಂಘ

ಅನಧಿಕೃತ ಆಟೋ ಮಾರಾಟ: RTO ಗೆ ದೂರು ನೀಡಿದ ಯಾದಗಿರಿ ಆಟೋ ಚಾಲಕರ ಸಂಘ

ಯಾದಗಿರಿ ಜು ೨೯:

ಕಲ್ಯಾಣ ಬಜಾಜ್ ಆಟೋ ಶೋರೂಮ್, ಕಲ್ಬುರ್ಗಿ ಇವರು ಯಾದಗಿರಿ ಶಾಖೆಯಲ್ಲಿ ಕಾನೂನು ನಿಯಮಗಳನ್ನು ಉಲ್ಲಂಘಿಸಿ, ಅರ್ಹತೆಯಿಲ್ಲದವರಿಗೆ ಆಟೋಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಕರ್ನಾಟಕ ಚಾಲಕರ ಪರಿಷತ್ ಆಟೋ ಚಾಲಕರ ಸಂಘ, ಯಾದಗಿರಿ ಜಿಲ್ಲೆ RTO ಕಚೇರಿಗೆ ದೂರು ನೀಡಿದೆ.

ಅನಧಿಕೃತ ಮಾರಾಟದ ಆರೋಪ:

ಆಟೋ ಚಾಲಕರ ಸಂಘದ ಪ್ರಕಾರ, ಕಲ್ಯಾಣ ಬಜಾಜ್ ಶೋರೂಮ್ ಯಾದಗಿರಿ ಶಾಖೆಯಲ್ಲಿ, ಕಾನೂನು ನಿಯಮಗಳನ್ನು ಗಾಳಿಗೆ ತೂರಿ, ಯಾವುದೇ ಲೈಸೆನ್ಸ್ ಅಥವಾ ಶಕ್ತಿಯುತ ಪರವಾನಗಿಗಳ ಪರಿಶೀಲನೆ ಮಾಡದೇ, ಕೇವಲ ಆಧಾರ ಕಾರ್ಡ ಆಧಾರದ ಮೇಲೆ ಆಟೋಗಳನ್ನು ಮಾರಾಟ ಮಾಡುತ್ತಿದೆ. ವಿಶೇಷವಾಗಿ, ಈ ವರ್ಷದಿಂದ ಆರಂಭವಾಗಿರುವ ಸಿಎನ್.ಜಿ. ಆಟೋಗಳ ಡಿಲೆವರಿ ಸಂದರ್ಭ, ಬ್ಯಾಡ್ಜ್ ಹೊಂದಿರುವ ಚಾಲಕರಿಗೆ ಮಾರಾಟ ಮಾಡಬೇಕೆಂಬ ನಿಯಮವನ್ನು ಉಲ್ಲಂಘಿಸುತ್ತಿದ್ದಾರೆ.

ನೈಜ ಚಾಲಕರಿಗೆ ಸಮಸ್ಯೆ:

ಈ ಅವ್ಯವಹಾರದಿಂದ ನೈಜ ಆಟೋ ಚಾಲಕರಿಗೆ ತೀವ್ರ ಸಮಸ್ಯೆಗಳು ಉಂಟಾಗುತ್ತಿವೆ. ನಿಯಮಾವಳಿಗಳನ್ನು ಪಾಲಿಸುತ್ತಾ ಕೆಲಸ ಮಾಡುತ್ತಿರುವ ಆಟೋ ಚಾಲಕರಿಗೆ, ಈ ಅನಧಿಕೃತ ಮಾರಾಟದಿಂದ ಇಕ್ಕಟ್ಟಾಗುತ್ತಿದೆ. ಲೈಸೆನ್ಸ್ ಇಲ್ಲದ, ಬ್ಯಾಡ್ಜ್ ಇಲ್ಲದ, ಇನ್ಸುರೆನ್ಸ್ ಇಲ್ಲದ ಆಟೋಗಳನ್ನು ರಸ್ತೆಗಿಳಿಸುವುದು ಅಪಾಯಕಾರಿಯಾಗಿದೆ.

ಆಪತ್ತಿನ ಪರಿಣಾಮ:

ಅನಧಿಕೃತ ಆಟೋ ಚಾಲನೆಯಿಂದ ಅಪಘಾತ ಸಂಭವಿಸಿದರೆ, ಅಥವಾ ಕಾನೂನು ಸಮಸ್ಯೆಗಳು ಎದುರಾದರೆ, ಅವನ ಅವಲಂಬಿತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ನೈಜ ಆಟೋ ಚಾಲಕರಿಗೆ ಇದರಿಂದ ಹೆಚ್ಚಿನ ತೊಂದರೆಗಳು ಉಂಟಾಗುತ್ತವೆ.

ಕಾನೂನು ಕ್ರಮದ ಅಗತ್ಯತೆ:

ಪ್ರಾದೇಶಿಕ ಸಾರಿಗೆ ಅಧಿಕಾರಿಗಳ RTO ಕಚೇರಿಗೆ ದೂರು ನೀಡಿದ ಆಟೋ ಚಾಲಕರ ಸಂಘವು, ಕೂಡಲೇ ಕ್ರಮ ಕೈಗೊಂಡು ಈ ಅವ್ಯವಹಾರವನ್ನು ತಡೆಯಬೇಕು ಮತ್ತು ನೈಜ ಆಟೋ ಚಾಲಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದೆ.

ಸಮಸ್ಯೆ ನಿವಾರಣೆಗೆ ಆಗ್ರಹ:

“ಇದನ್ನು ತಡೆಗಟ್ಟಲು ನಾವುಗಳು RTO ಕಚೇರಿಯಲ್ಲಿ ದೂರು ಸಲ್ಲಿಸಿದ್ದೇವೆ. ನಮ್ಮ ದೂರುನಂತರ ಕೂಡಲೇ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಇಲ್ಲವಾದರೆ, ನಾವು ಆಟೋಗಳನ್ನು ತಂದು RTO ಕಚೇರಿಗೆ ಮುತ್ತಿಗೆ ಹಾಕಲಾಗುವದು,” ಎಂದು ಸಂಘನೆ ಎಚ್ಚರಿಕೆ ನೀಡಿದರು.

ಸಂಘದ ಪ್ರಮುಖ ಸದಸ್ಯರ ಭಾಗಿ

ಈ ದೂರನ್ನು ನೀಡಲು ಸಂಘದ ಪ್ರಮುಖ ಸದಸ್ಯರಾದ ಲಕ್ಷ್ಮಣ ಚವ್ಹಾಣ (ಅಧ್ಯಕ್ಷರು), ಶಿವಶರಣಪ್ಪ ಕುಂಬಾರ (ಉಪಾಧ್ಯಕ್ಷರು), ಹನುಮಯ್ಯ ಕಲಾಲ್ (ಖಜಾಂಚಿ), ಶ್ರೀ ಹಣಮಂತ ನಾಯಕ (ಮುಖ್ಯ ಕಾರ್ಯದರ್ಶಿ), ಮರಗಪ್ಪ ನಾಯಕ, ಹನುಮಂತ ಬಬಲಾದಿ, ಸಾಬಯ್ಯ ತಾಂಡೂರಕರ್, ಈಶ್ವರ ನಾಯಕ, ಹುಸೇನಿ ಚಾಮನಳ್ಳಿ, ಅಂಬೋಜಿರಾವ್, ಹೀರಾಸಿಂಗ್ ಚವ್ಹಾಣ, ಮೌನೇಶ ಮಡಿವಾಳ, ಆಶಪ್ಪ ಜಟ್ಟಿ, ಅಮರ ಚವ್ಹಾಣ, ಮಹೇಶ ನಾಟೇಕರ್, ರಮೇಶ ರಾಠೋಡ, ಮಲ್ಲಯ್ಯ ಮುಷ್ಟೂರ, ಹಮ್ಜತ್, ಜಲ್ಲಾಲ್ ಮುಂತಾದವರು ಭಾಗಿಯಾಗಿದ್ದರು.

Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!