Mon. Dec 1st, 2025

ಮುಡಾ‌ ಹಗರಣ‌:ಬಿಜೆಪಿ ಅವರಿಗೆ ಆತಂಕವಿದ್ದು, ಹೀಗಾಗಿ ಐಟಿ, ಇಡಿ, ಸಿಬಿಐ ಕರೆಸೋದು:ಪ್ರಿಯಾಂಕ್ ಖರ್ಗೆ ಕಿಡಿ

ಮುಡಾ‌ ಹಗರಣ‌:ಬಿಜೆಪಿ ಅವರಿಗೆ ಆತಂಕವಿದ್ದು, ಹೀಗಾಗಿ ಐಟಿ, ಇಡಿ, ಸಿಬಿಐ ಕರೆಸೋದು:ಪ್ರಿಯಾಂಕ್ ಖರ್ಗೆ ಕಿಡಿ

ಜು ೧೨: ಬಿಜೆಪಿ ಅವಧಿಯಲ್ಲಿನ ಒಂದು ಹಗರಣಕ್ಕೂ ಐಟಿ, ಇಡಿ, ಸಿಬಿಐ ಕರೆಸಿಲ್ಲ. ಈಗ ಅವರಿಗೆ ಆತಂಕವಿದ್ದು, ಹೀಗಾಗಿ ಐಟಿ, ಇಡಿ, ಸಿಬಿಐ ಕರೆಸುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರು ನಗರಾಭಿಪವೃದ್ಧಿ ಪ್ರಾಧಿಕಾರದಲ್ಲಿ ಅವ್ಯವಹಾರ ಪ್ರಕರಣ ತನಿಖೆ ಮುಗಿಯುವವರೆಗೆ ಬಿಜೆಪಿ ನಾಯಕರು ಕಾಯಬೇಕಿತ್ತು ಎಂದು ಹೇಳಿದ್ದಾರೆ.

ಮುಡಾ‌ ಹಗರಣ‌ ವಿರೋಧಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದ ಅವರು, ಪ್ರತಿಭಟನಾ ಮೆರವಣಿಗೆಗೆ ಸಿದ್ಧವಾಗಿದ್ದವರನ್ನು ಮುಂಜಾಗ್ರತಾ ಕ್ರಮವಾಗಿ ಬಿಜೆಪಿಯವರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯವರು ನಮಗೂ ಹೀಗೆ ಮಾಡಿರಲಿಲ್ಲವಾ ಎಂದು ಪ್ರಶ್ನಿಸಿದರು. ಪಿಎಸ್ಐ ನೇಮಕಾತಿ ಹಗರಣ ಹೊರಗೆಳೆದಿದ್ದಕ್ಕೆ ನೋಟಿಸ್ ನೀಡಿದ್ದರು. ಬಿಜೆಪಿ ಅವಧಿಯಲ್ಲಿ ಮುಡಾದಲ್ಲಿ ಅಕ್ರಮ ನಡೆದಿದೆ. ರಾಜ್ಯದಲ್ಲಿ ಆಡಳಿತದಲ್ಲಿ ಬಿಜೆಪಿ ಯಾಕೆ ಅಂದೇ ಪ್ರಶ್ನೆ ಮಾಡಿರಲಿಲ್ಲ. 2011ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಪೀಕರ್​ಗೆ ನೀಡಿದ್ದ ನೋಟ್ ಬಗ್ಗೆ ಏಕೆ ತನಿಖೆ ಮಾಡಿಲ್ಲ ಎಂದಿದ್ದಾರೆ.

ಇದನ್ನು ಓದಿ :ಬ್ಯಾಂಕ್‌ ವಂಚನೆ:ನರೇಂದ್ರ ಮೋದಿ,ನಿರ್ಮಲಾ ಸೀತಾರಾಮನ್‌ ರಾಜೀನಾಮೆ ನೀಡುತ್ತಾರಾ-ಸಿದ್ದು ತಿರುಗೇಟು.

ಪೋಕ್ಸೋ ಕೇಸ್ ಮುಚ್ಚಿಹಾಕಲು ಮುಡಾ, ವಾಲ್ಮೀಕಿ ವಿಚಾರ ತಂದಿದ್ದಾರೆ. ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ಬಗ್ಗೆ ಬಿಜೆಪಿಯವರು ಬಾಯಿಬಿಡುತ್ತಿಲ್ಲ. ಬಿಜೆಪಿಯವರ ಹಗರಣ ಆಳ, ಅಗಲ ದೊಡ್ಡದಿದೆ ಸಮಯ ಹಿಡಿಯುತ್ತೆ. 545 ಪಿಎಸ್​ಐ ನೇಮಕಾತಿ ಹಗರಣದ ಪ್ರಾಥಮಿಕ ತನಿಖಾ ವರದಿ ಬಂದಿದೆ. 40 ಪರ್ಸೆಂಟ್ ಕಮಿಷನ್ ಹಗರಣದ ಬಗ್ಗೆಯೂ ದಾಖಲೆಗಳು ಸಿಕ್ಕಿವೆ. ಒಂದೊಂದೇ ಹೊರಗೆ ಬರುತ್ತಿದೆ ಎಂದರು.

ಎಐಸಿಸಿ ಸತ್ಯ ಶೋಧನ ಸಮಿತಿ ಮುಂದೆ ಹಳೆ ಮೈಸೂರು ಭಾಗದ ಶಾಸಕರು ಸಚಿವರಿಂದ ಗಂಭೀರ ಒತ್ತಡ ಹಾಲಾಗಿದೆ. 20ಕ್ಕೂ ಹೆಚ್ಚು ಸಚಿವರ ಖಾತೆಗಳನ್ನು ಬದಲಾಯಿಸದೇ ಇದ್ದರೆ ಸಚಿವರಿಂದ ಸರ್ಕಾರಕ್ಕೆ ಪಕ್ಷಕ್ಕೆ ಪ್ರಯೋಜನವಾಗುತ್ತಿಲ್ಲ. ಹಾಲಿ ಸಚಿವರು ಕೆಲವು ಖಾತೆಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಖಾತೆಗಳ ಆಳ ಅಗಲವನ್ನೇ ಅರ್ಥ ಮಾಡಿಕೊಂಡಿಲ್ಲ ಸಚಿವರು ಎಂದಿದ್ದಾರೆ.

Related Post

Leave a Reply

Your email address will not be published. Required fields are marked *

error: Content is protected !!