ಚಂಡೀಗಢ ಏ ೦೧:- 2018ರಲ್ಲಿ ಜಿರಾಕ್‌ಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್ ತಪ್ಪಿತಸ್ಥನಾಗಿದ್ದಾನೆ ಎಂಬ ತೀರ್ಪು ಮಾರ್ಚ್ 28ರಂದು ನ್ಯಾಯಾಲಯ ನೀಡಿತ್ತು. ಈಗ, ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದೆ.
ಪಾದ್ರಿಗೆ ಗಂಭೀರ ಆರೋಪ
ಸಂತ್ರಸ್ತೆ ನೀಡಿದ್ದ ದೂರಿನ ಆಧಾರದ ಮೇಲೆ, ಬಜೀಂದರ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 76, 420, 354, 294, 323, 506, 148, 149ರಡಿ ಪ್ರಕರಣ ದಾಖಲಾಗಿತ್ತು. ‘ಯೇಶು ಯೇಸು ಪ್ರವಾದಿ’ (Yeshu Yeshu Prophet) ಎಂಬ ಹೆಸರಿನಿಂದ ಖ್ಯಾತಿಯಾಗಿದ್ದ ಬಜೀಂದರ್ ಸಿಂಗ್, ತನ್ನ ಆಧ್ಯಾತ್ಮಿಕ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನೆಂಬ ಆರೋಪವಿತ್ತು.
ಕಾನೂನಿನ ಗೆಲುವು – ಸಂತ್ರಸ್ತೆ ಪರ ವಕೀಲರ ಪ್ರತಿಕ್ರಿಯೆ
ತೀರ್ಪಿನ ನಂತರ, ಸಂತ್ರಸ್ತೆಯ ಪರ ವಕೀಲ ಮಾತನಾಡಿ, “ಒಬ್ಬ ಆಧ್ಯಾತ್ಮಿಕ ನಾಯಕ ಇಂತಹ ಹೇಯ ಕೃತ್ಯ ಎಸಗಿದಿದ್ದಾನೆ ಎನ್ನುವುದು ಅಕ್ಷಮ್ಯ ಅಪರಾಧ. ಜನರು ಭಕ್ತಿಯಿಂದ ಅವರ ಮೇಲೆ ನಂಬಿಕೆ ಇಟ್ಟಿದ್ದರು. ಆದರೆ, ಅವರು ಆ ನಂಬಿಕೆಯನ್ನು ಹಾಳುಮಾಡಿದ್ದಾರೆ. ನ್ಯಾಯಾಲಯದ ತೀರ್ಪು ಸಂತ್ರಸ್ತೆಗೆ ನ್ಯಾಯ ಒದಗಿಸಿದೆ. ಜನರು ಅಪರಾಧ ಮಾಡುವ ಮೊದಲು ಕಾನೂನಿನ ಶಕ್ತಿಯನ್ನು ಅರಿಯಬೇಕು” ಎಂದು ಹೇಳಿದ್ದಾರೆ.
ಮಹಿಳೆ ನೀಡಿದ ದೂರು
ಫೆಬ್ರವರಿ 28ರಂದು 22 ವರ್ಷದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪಾದ್ರಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪದೊಂದಿಗೆ FIR ದಾಖಲಾಗಿತ್ತು. ಸಂತ್ರಸ್ತೆ 2017ರ ಅಕ್ಟೋಬರ್‌ನಲ್ಲಿ ತನ್ನ ಪೋಷಕರೊಂದಿಗೆ ‘ಯೇಶು ಯೇಸು ಪ್ರವಾದಿ’ ಚರ್ಚ್‌ಗೆ ಹೋಗಿದ್ದಳು. ಆಗ ಪಾದ್ರಿ ಬಜೀಂದರ್ ಸಿಂಗ್ ಆಕೆಯ ದೂರವಾಣಿ ಸಂಖ್ಯೆ ಪಡೆದು, ನಿಯಮಿತವಾಗಿ ಸಂದೇಶ ಕಳುಹಿಸಲು ಆರಂಭಿಸಿದ್ದ. ಪಾದ್ರಿಯ ವರ್ತನೆಯಿಂದ ಹೆದರಿದ ಆಕೆ, ಇದನ್ನು ತನ್ನ ಪೋಷಕರಿಗೆ ತಿಳಿಸಲು ತಯಾರಾಗಿರಲಿಲ್ಲ.
ಚರ್ಚ್‌ನಲ್ಲಿ ಲೈಂಗಿಕ ದೌರ್ಜನ್ಯ
2022 ರಿಂದ, ಪಾದ್ರಿ ಭಾನುವಾರಗಳಂದು ಚರ್ಚ್‌ನ ಕ್ಯಾಬಿನ್‌ನಲ್ಲಿ ಆಕೆಯನ್ನು ಒಂಟಿಯಾಗಿ ಇರಿಸಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ. ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಿ, ತನ್ನ ವಿರುದ್ಧ ದೂರು ನೀಡಿದರೆ ತಾನು ಮತ್ತು ಆಕೆಯ ಕುಟುಂಬದವರಿಗೆ ಹಾನಿ ಮಾಡುತ್ತೇನೆ ಎಂದು ಬೆದರಿಸಿದ್ದ. ಮಹಿಳೆಯ ದೂರಿನ ಪ್ರಕಾರ, ಬಜೀಂದರ್ ಸಿಂಗ್ ತನ್ನ ಮೇಲೆ ಅತ್ಯಾಚಾರ ಎಸಗಿದ್ದ , ಈ ಘಟನೆಯ ವೀಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದನು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಪಾದ್ರಿ ಬಜೀಂದರ್ ಸಿಂಗ್‌ಗೆ ಕಠಿಣ ಶಿಕ್ಷೆಯನ್ನು ವಿಧಿಸಿದ್ದು, ಇದು ಇನ್ನೂ ಹೆಚ್ಚಿನ ಹೀನಾಯ ಕೃತ್ಯಗಳನ್ನು ತಡೆಯಲು ಪಾಠವಾಗಲಿದೆ ಎಂದು ವಕೀಲರು ಅಭಿಪ್ರಾಯಪಟ್ಟಿದ್ದಾರೆ.