Mon. Jul 21st, 2025

2,000 ಹಣ ನಿಮ್ಮ ಖಾತೆಗೆ ಬರುವ ನಿರೀಕ್ಷೆಯಿದೆ, ನಿಮ್ಮ ಹೆಸರಿದೆಯಾ ಎಂದು ಚೆಕ್ ಮಾಡಿ .

2,000 ಹಣ ನಿಮ್ಮ ಖಾತೆಗೆ ಬರುವ ನಿರೀಕ್ಷೆಯಿದೆ, ನಿಮ್ಮ ಹೆಸರಿದೆಯಾ ಎಂದು ಚೆಕ್ ಮಾಡಿ .

 ಈ ದಿನ ನಿಮ್ಮ ಖಾತೆಗೆ 2,000

ಪಿಎಂ ಕಿಸಾನ್ ನಿಧಿಯ ಮುಂದಿನ ಕಂತು ಶೀಘ್ರವೇ ದೇಶದ ರೈತರ ಕೈಸೇರಲಿದೆ. ಈ ಯೋಜನೆಯ 15ನೇ ಕಂತಿನ 2,000 ಹಣ ನವೆಂಬರ್ ಮೊದಲ ವಾರದಲ್ಲಿ ನಿಮ್ಮ ಖಾತೆಗೆ ಬರುವ ನಿರೀಕ್ಷೆಯಿದೆ. ಈ ಯೋಜನೆಗೆ ನೀವು ಇನ್ನೂ ಅರ್ಜಿ ಸಲ್ಲಿಸದಿದ್ದರೆ, PM ಕಿಸಾನ್ ಯೋಜನೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. eKYC ಮಾಡದ ರೈತರು ಆದಷ್ಟು ಬೇಗ ಮಾಡಿ, ಇಲ್ಲದಿದ್ದರೆ 15ನೇ ಕಂತಿನ ಹಣ ಸಿಗುವುದಿಲ್ಲ. eKYC ಮಾಡಲು, ನಿಮಗೆ ಆಧಾರ್ & ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆಯ ಅಗತ್ಯವಿದೆ.

ಪಿಎಂ ಕಿಸಾನ್: eKYC ಮಾಡುವುದು ಹೇಗೆ?

  •  ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ
  • ಫಾರ್ಮರ್ ಕಾರ್ನರ್ ಅಡಿಯಲ್ಲಿ ‘eKYC’ ಆಯ್ಕೆಯನ್ನು ಕ್ಲಿಕ್ ಮಾಡಿ
  •  ಈಗ ಆಧಾರ್ ಸಂಖ್ಯೆಯನ್ನು ನಮೂದಿಸಿ
  •  ಆಗ OTP ನಿಮ್ಮ ಮೊಬೈಲ್ ಸಂಖ್ಯೆಗೆ ಬರುತ್ತದೆ. ಅದನ್ನು ಸಲ್ಲಿಸಿ.

NOTE: ಪಿಎಂ ಕಿಸಾನ್‌ನ ವೆಬ್‌ಸೈಟ್ ಪ್ರಕಾರ, ಪಿಎಂ ಕಿಸಾನ್ ನೋಂದಾಯಿತ ರೈತರಿಗೆ eKYC ಮಾಡುವುದು ಕಡ್ಡಾಯ.

OTP ಆಧಾರಿತ eKYC ಅನ್ನು PM ಕಿಸಾನ್ ಪೋರ್ಟಲ್ ಅಥವಾ ಹತ್ತಿರದ CSC ಕೇಂದ್ರದ ಮೂಲಕ ಮಾಡಬಹುದು.

ಪಿಎಂ ಕಿಸಾನ್: ಲಿಸ್ಟ್‌ನಲ್ಲಿ ನಿಮ್ಮ ಹೆಸರಿದೆಯಾ ಎಂದು ಚೆಕ್ ಮಾಡುವುದು ಹೇಗೆ?

ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ (https://pmkisan.gov.in/) ಭೇಟಿ ನೀಡಿ.

  •  ಈಗ ಫಲಾನುಭವಿಗಳ ಪಟ್ಟಿಯ ಮೇಲೆ ಕ್ಲಿಕ್ ಮಾಡಿ.
  •  ಇದರ ನಂತರ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್ ಮತ್ತುಗ್ರಾಮವನ್ನು ನಮೂದಿಸಿ ಮತ್ತು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಿ.
  •  ಆಗ ಫಲಾನುಭವಿಗಳ ಪಟ್ಟಿ ನಿಮ್ಮ ಸ್ಕಿನ್ ಮೇಲೆ ಬರುತ್ತದೆ.ನಿಮ್ಮ ಹೆಸರಿದೆಯಾ ಎಂದು ಚೆಕ್ ಮಾಡಿ.
Whatsapp Group Join
facebook Group Join

Related Post

Leave a Reply

Your email address will not be published. Required fields are marked *

error: Content is protected !!